alex Certify ಬಿರುಗಾಳಿಗೂ ಜಗ್ಗದೆ ಕಾರ್ಯ ನಿರ್ವಹಿಸಿದ ಪತ್ರಕರ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿರುಗಾಳಿಗೂ ಜಗ್ಗದೆ ಕಾರ್ಯ ನಿರ್ವಹಿಸಿದ ಪತ್ರಕರ್ತೆ

ವಾಷಿಂಗ್ಟನ್ ಡಿಸಿ: ಜಗತ್ತಿನಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಕೆಲವು ವೃತ್ತಿಯವರು ಮನೆಯಲ್ಲಿ ಕೂರುವಂತಿಲ್ಲ. ವೈದ್ಯರು, ನರ್ಸ್, ಪೊಲೀಸರು ಅದರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ,‌ ಅದೆಷ್ಟೋ ಜನರ ಸಾಮಾಜಿಕ ಕಳಕಳಿಯ ಕೆಲಸ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅವರ ಸಾಹಸ ಅನುಭವಕ್ಕೆ ಬರುವುದಿಲ್ಲ.

ಅದರಲ್ಲಿ ಪತ್ರಕರ್ತರು ಸಹ ಸೇರುತ್ತಾರೆ. ಇದೀಗ ಅಮೆರಿಕಾದ ವರದಿಗಾರ್ತಿಯೊಬ್ಬಳು ಬಿರುಗಾಳಿಯನ್ನೂ ಲೆಕ್ಕಿಸದೇ ಸುದ್ದಿ ನೀಡಿ ಈಗ ಸಾಮಾಜಿಕ ಜಾಲತಾಣದಲ್ಲಿ‌ ಸುದ್ದಿಯಾಗಿದ್ದಾರೆ.

ಈಗಿನ ಕರೊನಾ ಸ್ಥಿತಿಯಲ್ಲಿ ಅಷ್ಟೇ ಅಲ್ಲದೆ, ಹವಾಮಾನ ವೈಪರೀತ್ಯವಾದಾಗ ನಮಗೆ ಸುದ್ದಿ ಕೊಡಲು ಪತ್ರಕರ್ತರು ಮಾಡುವ ಸಾಹಸ ಗಮನಕ್ಕೆ ಬಾರದೆ ಹೋಗಬಹುದು. ಅಮೆರಿಕಾದ ಎನ್.ಬಿ.ಸಿ. ಚಾನಲ್ ನ ಪತ್ರಕರ್ತೆ ತಮ್ಮ  ವೃತ್ತಿ ನಿಷ್ಠೆಯಿಂದ ಗಮನ ಸೆಳೆದಿದ್ದಾರೆ. ಕ್ರಿಸ್ಟಿನ್ ವೆಲ್ಕರ್ ಜೋರಾಗಿ ಬೀಸುತ್ತಿದ್ದ ಗಾಳಿಯ ನಡುವೆಯೂ ತಮ್ಮ ಚಾನಲ್ ಗೆ ನೇರ ಪ್ರಸಾರದ ಸುದ್ದಿ ಕೊಟ್ಟಿದ್ದಾರೆ.

ಕ್ಯಾಮರಾ ಮುಂದೆ ನಿಂತು ವರದಿ ನೀಡುವಾಗ ಜೋರಾಗಿ ಬೀಸುವ ಗಾಳಿಯಿಂದ ಬೀಳುತ್ತಿದ್ದ ಲೈಟ್ ಕಂಬಗಳನ್ನು ತಪ್ಪಿಸಿಕೊಂಡು ಎಲ್ಲಿಯೂ ಹೆದರದೆ‌ ಸುದ್ದಿಯನ್ನು ಮುಂದುವರಿಸಿದ್ದಾರೆ. ಈ ವಿಡಿಯೋವನ್ನು ಜೀವನ್ ವಿಠ್ಠಲ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ಕ್ರಿಸ್ಟಿನ್ ಗೆ ಹೊಗಳಿಕೆಯ ಮಹಾಪೂರವೇ ಹರಿದುಬರುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...