alex Certify ಇಡಿ ಊರಿನಲ್ಲಿರೋದು ಇಬ್ಬರೇ ಆದರು ಮರೆತಿಲ್ಲ ಕೊರೊನಾ ನಿಯಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಡಿ ಊರಿನಲ್ಲಿರೋದು ಇಬ್ಬರೇ ಆದರು ಮರೆತಿಲ್ಲ ಕೊರೊನಾ ನಿಯಮ..!

ಕರೊನಾ ವೈರಸ್​ ಸೋಂಕು ಹರಡುವಿಕೆ ಕಡಿಮೆ ಮಾಡುವುದಕ್ಕಾಗಿ ವಿಶ್ವದ ಎಲ್ಲ ರಾಷ್ಟ್ರಗಳು ಮಾಸ್ಕ್​ ಹಾಗೂ ಸಾಮಾಜಿಕ ಅಂತರವನ್ನ ಕಡ್ಡಾಯ ಮಾಡಿದೆ.

ಜನನಿಬಿಡ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡೋದು ಕಡ್ಡಾಯ. ಆದರೆ ಇಟಲಿಯ ನಾರ್ಟೋಸ್​ ಎಂಬ ಊರಿನಲ್ಲಿ ಇರೋದು ಇಬ್ಬರೇ ವೃದ್ಧರಾದರೂ ಸಹ ಅವರು ಕರೊನಾ ವಿರುದ್ಧ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ನಿವೃತ್ತಿ ಜೀವನ ಸಾಗಿಸುತ್ತಿರುವ 82 ವರ್ಷದ ಜಿಯೋವಾನಿ ಕರಿಲ್ಲಿ ಹಾಗೂ 74 ವರ್ಷದ ಜಿಯಾಂಪಿಯೊ ನೊಬಿಲಿ ಮಾಸ್ಕ್​ ಧರಿಸೋದನ್ನ ಮರೆಯೋದೇ ಇಲ್ಲ. ಅಲ್ಲದೇ ಇವರಿಬ್ಬರು ಒಬ್ಬರನ್ನೊಬ್ಬರು ಮುಖಾಮುಖಿಯಾಗೋದು 1 ಮೀಟರ್​ ಅಂತರದಲ್ಲೇ

ಉಂಬ್ರಿಯಾದ ಪೆರುಜಿಯಾ ಪ್ರಾಂತ್ಯದಲ್ಲಿರುವ ಈ ಊರು 900 ಮೀಟರ್​ ಎತ್ತರದಲ್ಲಿ ಇದೆ. ಊರಿನ ಹೊರಗಿರೋ ನಮ್ಮ ಕಾಳಜಿ ಯಾರು ವಹಿಸದಿದ್ದರೆ ಏನಂತೆ ನಾವೇ ವಹಿಸಿಕೊಳ್ತೇನೆ ಅನ್ನೋ ಇವರಿಬ್ಬರು ಕರೊನಾ ತಡೆಗೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...