alex Certify ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಿಗಲಿದೆ ಭರ್ಜರಿ ʼಗಿಫ್ಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಿಗಲಿದೆ ಭರ್ಜರಿ ʼಗಿಫ್ಟ್ʼ

ಇಟಲಿ: ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಸಿಲಿ ಎಂಬ ಇಟಲಿಯ ದ್ವೀಪ ರಿಯಾಯಿತಿ ಯೋಜನೆಗಳನ್ನು ಈಗಾಗಲೇ ಪ್ರಕಟಿಸಿದೆ. ಮೇ 4 ರ ನಂತರ ಅಥವಾ ಕರೋನಾ ಲಾಕ್‌ ಡೌನ್ ಸಂಪೂರ್ಣ ಮುಗಿದ ನಂತರ ಬರುವ ವ್ಯಕ್ತಿಯ ಅರ್ಧ ವಿಮಾನ ಪ್ರಯಾಣ ಹಾಗೂ ವಾಸ್ತವ್ಯದ ವೆಚ್ಚವನ್ನು ಭರಿಸಲಾಗುವುದು ಎಂದು ದ್ವೀಪದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಮೂರು ದಿನ ವಾಸ್ತವ್ಯ ಮಾಡಿದಲ್ಲಿ ಒಂದು ದಿನದ ವೆಚ್ಚವನ್ನು ಕಡಿತ ಮಾಡಲಾಗುವುದು. ಮ್ಯೂಸಿಯಮ್ ಹಾಗೂ ಪುರಾತತ್ವ ಕೇಂದ್ರದ ಪ್ರವೇಶ ಶುಲ್ಕವನ್ನು ಭರಿಸಲಾಗುವುದು ಎಂದು ವಿವರಿಸಲಾಗಿದೆ.

ಇಟಲಿಯ ಜಿಡಿಪಿಯ ಶೇ.13 ರಷ್ಟು ಪ್ರವಾಸೋದ್ಯಮದಿಂದ ಬರಲಿದೆ. ಆದರೆ, ಕರೋನಾದಿಂದ ಪ್ರವಾಸೋದ್ಯಮ ಸಂಪೂರ್ಣ ಬಂದಾಗಿದೆ. ಅದಕ್ಕಾಗಿ ಸರ್ಕಾರ ಉತ್ತೇಜನೆಯ ಯೋಜನೆಗಳನ್ನು ರೂಪಿಸಿದೆ. ಅದಕ್ಕಾಗಿ 43 ಮಿಲಿಯನ್ ಯೂರೋ ಅನುದಾನ ನೀಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...