ಕೆಲವೊಂದು ಹೋಟೆಲ್ಗಳು ಗ್ರಾಹಕರಿಗೆ ವಿಚಿತ್ರವಾಗಿ ಬಿಲ್ಗಳನ್ನ ನೀಡುವ ಮೂಲಕ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರ್ತಾವೆ.
ಬಾಲಿವುಡ್ ನಟ ರಾಹುಲ್ ಬೋಸ್ರಿಗೆ ಹೋಟೆಲ್ ವೊಂದು ಕೇವಲ 2 ಬಾಳೆಹಣ್ಣಿಗೆ 442 ರೂಪಾಯಿ ಚಾರ್ಜ್ ವಿಧಿಸುವ ಮೂಲಕ ಸುದ್ದಿಯಾಗಿತ್ತು. ಅದೇ ರೀತಿ ಲೇಖಕ ಕಾರ್ತಿಕ್ ಧಾರ್ 2 ಬೇಯಿಸಿದ ಮೊಟ್ಟೆಗೆ ಬರೋಬ್ಬರಿ 1700 ರೂಪಾಯಿ ಪಾವತಿ ಮಾಡಿದ್ದರು. ಇದೀಗ ಇದೇ ರೀತಿಯ ದುಬಾರಿ ಬಿಲ್ ಒಂದು ನೆಟ್ಟಿಗರ ಹುಬ್ಬೇರಿಸಿದೆ.
ಆಸ್ಟ್ರೇಲಿಯಾದ ಕ್ರಿಕೆಟ್ ವರದಿಗಾರ ಪೀಟರ್ ಲ್ಯಾಲೋರ್ ಮ್ಯಾಂಚೆಸ್ಟರ್ನ ಹೋಟೆಲ್ ಒಂದರಲ್ಲಿ ಬಿಯರ್ಗೆ ಬರೋಬ್ಬರಿ 71 ಲಕ್ಷ ರೂಪಾಯಿ ಬಿಲ್ ಪಾವತಿ ಮಾಡಿದ್ದಾರೆ ಅಂದರೆ ನಿಮಗೆ ನಂಬೋಕೆ ಅಸಾಧ್ಯ ಎನಿಸಬಹುದು..!
ತಮ್ಮ ಸ್ನೇಹಿತರ ಜೊತೆ ಮಲ್ಮಾಷನ್ ಹೋಟೆಲ್ಗೆ ತೆರಳಿದ್ದ ಪೀಟರ್ ಬಿಯರ್ ಆರ್ಡರ್ ಮಾಡಿದ್ದರು. ಇದಕ್ಕಾಗಿ ಪೀಟರ್ ಕಾರ್ಡ್ ಮೂಲಕ ಬಿಲ್ ಪಾವತಿ ಮಾಡಿದ್ದರು. ಈ ವೇಳೆ ಅವರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 99,983.64 ಡಾಲರ್ ಡೆಬಿಟ್ ಆಗಿದೆ. ಇದು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 71 ಲಕ್ಷ 65 ಸಾವಿರದ 31 ರೂಪಾಯಿಗಳಾಗಿದೆ.