alex Certify ಶತಮಾನೋತ್ಸವ ಆಚರಿಸಿದ 88 ಮೊಮ್ಮಕ್ಕಳಿರುವ ಹಿರಿಯಜ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತಮಾನೋತ್ಸವ ಆಚರಿಸಿದ 88 ಮೊಮ್ಮಕ್ಕಳಿರುವ ಹಿರಿಯಜ್ಜಿ

ಉತ್ತರ ಕರೋಲಿನಾದ ಹಿರಿ ಹಿರಿ ಮುತ್ತಜ್ಜಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರಿಗೆ 88 ಮೊಮ್ಮಕ್ಕಳಿದ್ದು, ಒಟ್ಟಾರೆ 173 ಮಂದಿಗೆ ಕುಟುಂಬದ ಹಿರಿಯ ಜೀವವಾಗಿದ್ದಾರೆ.

ಜೂಲಿಯಾ ಲೀ ಕೆಲ್ಲಿ ಹೆಸರಿನ ಇವರಿಗೆ 5 ಮಕ್ಕಳಿದ್ದು, 30 ಮೊಮ್ಮಕ್ಕಳು, 88 ಮರಿ ಮಕ್ಕಳು, 49 ಮರಿ ಮೊಮ್ಮಕ್ಕಳು ಹಾಗೂ ಇನ್ನೂ ಒಂದು ಮುಂದಿನ ತಲೆಮಾರಿನ ಒಂದು ಮೊಮ್ಮಗು ಇದೆ. ಪ್ರತಿವರ್ಷವೂ ಈಕೆಯ ಕುಡಿಗಳೆಲ್ಲಾ ಒಂದೆಡೆ ಸೇರಿಕೊಂಡು ರಿ ಯೂನಿಯನ್ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತಾರೆ.

ಈ ಹಿರಿಯಜ್ಜಿಯ 100ನೇ ಹುಟ್ಟುಹಬ್ಬಕ್ಕೆ ಕೇವಲ ಅವರ ಕುಟುಂಬಸ್ಥರು ಮಾತ್ರವಲ್ಲದೇ ರಸ್ತೆಯಲ್ಲಿ ಹೋಗುತ್ತಿದ್ದ ಮಂದಿಯೆಲ್ಲಾ ವಿಶ್ ಮಾಡಿದ್ದು, ಫಾಕ್ಸ್‌ 13 ಸುದ್ದಿಯಲ್ಲಿ ವರದಿಯಾಗಿದೆ.

ಈ ಸ್ಮರಣೀಯ ದಿನವನ್ನು ಅವರ ಮೊಮ್ಮಗಳು ಕೆಲ್ಲಿ ಓಕ್ಲೀ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಈ ಸಂಭ್ರಮಾಚರಣೆಯ ವಿಡಿಯೋಗಳನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

Dear Grandma I’m blessed to still have you! Today is your day…live it up! I pray that I live as long as you and still be cute and healthy! I still need to learn how to make those cakes from scratch like you but we still got time? Keep blessing us with just living…I love you and Happy Birthday!!’ My Gma 100 y’all ? Thank you Vnicewitit Teasley for doing her her #bombshellbeauty

Posted by Kelley Oakley on Saturday, August 8, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...