alex Certify ನೆಚ್ಚಿನ ಫುಡ್‌ ಕದ್ದು ಸಿಕ್ಕಿಬಿದ್ದ ವೇಳೆ ಪೆಚ್ಚು ಮೋರೆ ಹಾಕಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ಫುಡ್‌ ಕದ್ದು ಸಿಕ್ಕಿಬಿದ್ದ ವೇಳೆ ಪೆಚ್ಚು ಮೋರೆ ಹಾಕಿದ ಶ್ವಾನ

ತಿಂಡಿಪೋತ ಸಾಕು ಪ್ರಾಣಿಗಳು ಯಾವಾಗಲೂ ಮನೆಯಲ್ಲಿ ತಿಂಡಿಯ ತಲಾಷೆಯಲ್ಲಿ ಇರುತ್ತವೆ. ಆವಾಗ ಅವುಗಳನ್ನು ನೋಡುವುದು ಬಲೇ ಕ್ಯೂಟ್ ಆಗಿರುತ್ತದೆ. ಕೆಲವೊಮ್ಮೆ ತುಂಟ ಪ್ರಾಣಿಗಳು ಅಡುಗೆ ಮನೆಗೆ ದಾಳಿ ಮಾಡುವ ಸಾಧ್ಯತೆಗಳೂ ಇರುತ್ತವೆ .

ಗೋಲ್ಡನ್ ರಿಟ್ರೈವರ್‌ ಶ್ವಾನವೊಂದು ಹೀಗೇ ಅಡುಗೆ ಮನೆಯ ಕೌಂಟರ್‌ನಿಂದ ಪೆಟ್‌ ಫುಡ್ ‌ಅನ್ನು ಕದಿಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಚ್‌ಟಾಪ್ ಮೇಲೆ ಏರ್‌ಟೈಟ್‌ ಡಬ್ಬಿಯಲ್ಲಿ ಇಟ್ಟಿರುವ ಆಹಾರವನ್ನು ಕದಿಯಲು ನೋಡುತ್ತಿರುವ ಈ ಶ್ವಾನವು ತನ್ನ ಹಿಂದಿನ ಕಾಲುಗಳ ಮೇಲೆ ನಿಂತಿರುವುದನ್ನು ನೋಡಬಹುದಾಗಿದೆ.

ಆದರೆ, ತನ್ನ ಈ ಯತ್ನದಲ್ಲಿ ಮಾಲೀಕರಿಗೆ ಸಿಕ್ಕಿಬಿದ್ದ ಆ ಮುದ್ದು ನಾಯಿಯ ಮುಖವನ್ನು ನೋಡುವುದು ಇನ್ನಷ್ಟು ಮಜವಾಗಿದೆ. ’ಅಯ್ಯೋ ಸಿಕ್ಕಾಕಿಕೊಂಡುಬಿಟ್ಟೆ’ ಎಂಬ ಮುಖಭಾವದಲ್ಲಿರುವ ಅದರ ಮುಖವನ್ನು ನೋಡುವುದೇ ಒಂದು ಮಜ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...