ವಿಯೆಟ್ನಾಂನಲ್ಲಿ ಹೊಸ ಮಾದರಿಯ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ನ್ಗುಯೆನ್ ಥಾನ್ ಲಾಂಗ್ ಹೇಳಿದ್ದಾರೆ.
ವಿಯೆಟ್ನಾಂ ಆರೋಗ್ಯ ಸಚಿವರಾಗಿರುವ ನ್ಗುಯೆನ್ ಥಾನ್ ಲಾಂಗ್ ಈ ಬಗ್ಗೆ ಮಾಹಿತಿ ನೀಡಿದ್ದು ಶನಿವಾರ ದೇಶದಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆ ಮಾಡಲಾಗಿದೆ. ಇದು ಭಾರತ ಹಾಗೂ ಬ್ರಿಟನ್ ರೂಪಾಂತರಿ ವೈರಸ್ಗಳ ಮಿಶ್ರಣವಾಗಿದೆ ಹಾಗೂ ಇದು ಗಾಳಿಯಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಹೇಳಿದ್ದಾರೆ.
ಈ ಹೈಬ್ರಿಡ್ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.