ನಮ್ಮೊಳಗಿನ ಹೇಳಿಕೊಳ್ಳಲಾಗದ ನಗ್ನ ರಹಸ್ಯಗಳಲ್ಲಿ ಒಂದು ಒಳುಡುಪು ಕೊಡುವ ಕಿರಿಕಿರಿ….! ಹೌದು, ಬಲು ಬೇಗ ಕ್ರಿಮಿಗಳ ದಾಳಿಗೆ ಒಳಗಾಗುವ ಒಳುಡುಪುಗಳು ವಾಸನೆ ಬಂದು ಬಿಡುವುದಲ್ಲದೇ ಹೊರ ಬಟ್ಟೆಯೂ ವಾಸನೆ ಬರುವಂತೆ ಮಾಡಿಬಿಡುತ್ತವೆ.
ಮಿನೆಸೋಟಾ ಮೂಲದ ಕಂಪನಿಯೊಂದು ಈ ಸಮಸ್ಯೆಗೆ ಪರಿಹಾರವೊಂದನ್ನು ಕಂಡುಕೊಂಡಿದೆ. ಸ್ವಯಂ ಆಗಿ ಸ್ವಚ್ಛವಾಗುವ ಒಳುಡುಪುಗಳನ್ನು ಹರ್ಕ್ಲೆಯಾನ್ ಹೆಸರಿನ ಕಂಪನಿ ಹೊರತಂದಿದ್ದು, ’ಕರ್ಬಿ’ ಹೆಸರಿನಲ್ಲಿ ತಾನು ತಂದ ಈ ಒಳಉಡುಪನ್ನು ’ವಾಸನೆ ಬಾರದಂತೆ ತಿಂಗಳ ಮಟ್ಟಿಗಾದರೂ ಧರಿಸಬಹುದು’ ಎಂದು ಹೇಳಿಕೊಂಡಿದೆ.
ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಮದುವೆಗೆ ಹೊರಟಿದ್ದ ನಾಲ್ವರ ಸಾವು
ಹರ್ಕ್‌ಫೈಬರ್ ಹೆಸರಿನ ವಿಶಿಷ್ಟ ಫ್ಯಾಬ್ರಿಕ್‌ನಿಂದ ಈ ಒಳುಡುಪನ್ನು ತಯಾರಿಸಲಾಗಿದ್ದು, ಇದನ್ನು ಬಿದಿರು, ನೀಲಗಿರಿ, ಬೀಚ್‌ವುಡ್ ಹಾಗೂ ತಾಮ್ರದಿಂದ ತಯಾರಿಸಲಾಗಿದೆ. ಆದ್ದರಿಂದ ಈ ಒಳುಡುಪು ಬಹಳ ಸಮಯದವರೆಗೂ ಸ್ವಚ್ಛ ಹಾಗೂ ಸ್ವಸ್ಥವಾಗಿ ಕಾಣುತ್ತದೆ.