
ಬರೀ ಉಪ್ಪು ಬಳಸಿಕೊಂಡು ಜಗತ್ತಿನ ಪ್ರಖ್ಯಾತರ ಚಿತ್ರಗಳನ್ನು ಬಿಡಿಸುವ ಮೂಲಕ ಈಜಿಪ್ಟ್‌ನ ಕಲಾವಿದ ಹ್ಯಾನಿ ಗೆನೆಡಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ಪ್ರಖ್ಯಾತ ಲ್ಯಾಂಡ್‌ಮಾರ್ಕ್‌ಗಳು, ಕ್ರೀಡಾ ದಿಗ್ಗಜರು ಸೇರಿದಂತೆ ಅನೇಕರ ಚಿತ್ರಗಳನ್ನು ಬಿಡಿಸುವ ಮೂಲಕ ಗೆನೆಡಿ ಸುದ್ದಿಯಲ್ಲಿದ್ದಾರೆ.
ಅವರ ಇತ್ತೀಚಿನ ಕ್ರಿಯೇಶನ್ ಎಂದರೆ ಪ್ರಖ್ಯಾತ ನಟ ಅಲ್ ಪ್ಯಾಸಿನೋ. ಕಪ್ಪು ನೆಲದ ಮೇಲೆ ಬಿಳಿ ಉಪ್ಪನ್ನು ಕಲಾತ್ಮಕವಾಗಿ ಸುರಿದು, ಅಲ್ ಪ್ಯಾಸಿನೋ ಅವರ ಚಿತ್ರ ಬಿಡಿಸಿದ್ದಾರೆ ಗೆನೆಡಿ.
ನೈಲ್ ಮುಖಜ ಭೂಮಿಯ ಶರಿಕಾದಲ್ಲಿರುವ ತಮ್ಮ ಮನೆಯ ಸ್ಟುಡಿಯೋದಲ್ಲಿ ಗೆನೆಡಿ ಈ ಚಿತ್ರಗಳನ್ನು ಬಿಡಿಸುತ್ತಾರೆ. ತಮ್ಮ ಈ ಕಲಾಕೃತಿಗಳು ಕೈರೋ ಹಾಗೂ ಜಗತ್ತಿನ ಇತರ ಭಾಗಗಳಲ್ಲಿ ಸುದ್ದಿ ಮಾಡುತ್ತವೆ ಎಂಬ ಭರವಸೆಯಲ್ಲಿದ್ದಾರೆ 24 ವರ್ಷದ ಈ ಕಲಾವಿದೆ.