ಸದ್ಯ ವಿಶ್ವದಲ್ಲಿ koರೊನಾ ಬಿಟ್ಟರೆ ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗ್ತಾರೆ ಅನ್ನೋದೇ ದೊಡ್ಡ ಚರ್ಚೆಯ ವಿಷಯವಾಗಿ ಹೋಗಿದೆ. ಆದರೆ ನೀವು ಗೂಗಲ್ನಲ್ಲಿ ಅಮೆರಿಕದ ಮುಂದಿನ ಅಧ್ಯಕ್ಷ ಯಾರು ಅಂತಾ ಹುಡುಕೋಕೆ ಹೋದರೆ ಲಾಸ್ ಎಂಜಲೀಸ್ ಮೂಲದ ಕಲಾವಿದ ಗ್ರೆಷೆನ್ ಆಂಡ್ರ್ಯೂ ಅವರ ಕೈಲಿ ಮೂಡಿಬಂದ ಚಿತ್ರಗಳು ಕಾಣಸಿಗ್ತಿದ್ದು ನೆಟ್ಟಿಗರು ಗೊಂದಲಕ್ಕೊಳಗಾಗಿದ್ದಾರೆ.
ಸಿಲಿಕಾನ್ ವ್ಯಾಲಿಯ ಗೂಗಲ್ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಲಾವಿದ ಗ್ರೆಷೆನ್ ತನ್ನ ಕಲಾಕೃತಿಯನ್ನ ಜನಪ್ರಿಯ ಮಾಡಬೇಕು ಎಂಬ ಉದ್ದೇಶದಿಂದ ಸರ್ಚ್ ಇಂಜಿನ್ನಲ್ಲಿ ಈ ರೀತಿಯ ಬದಲಾವಣೆ ಮಾಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಅಮೆರಿಕದ ಮುಂದಿನ ಅಧ್ಯಕ್ಷ ಯಾರು ಎಂದು ಗೂಗಲ್ ಸರ್ಚ್ ಮಾಡಿದರೆ ಜೋ ಬಿಡನ್ ಇಲ್ಲವೇ ಡೊನಾಲ್ಡ್ ಟ್ರಂಪ್ರ ಫೋಟೋ ಕಾಣಸಿಗುವ ಮೊದಲೇ ಈ ಕಲಾಕೃತಿಗಳು ಕಂಡು ಬರುತ್ತವೆ.