alex Certify ದಂಗಾಗಿಸುತ್ತೆ ʼಆನ್ ​ಲೈನ್ʼ​ ಕ್ಲಾಸ್ ತಪ್ಪಿಸಿಕೊಳ್ಳಲು ಈ ಪೋರಿ ಮಾಡಿದ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ʼಆನ್ ​ಲೈನ್ʼ​ ಕ್ಲಾಸ್ ತಪ್ಪಿಸಿಕೊಳ್ಳಲು ಈ ಪೋರಿ ಮಾಡಿದ ಪ್ಲಾನ್

ಕೊರೊನಾ ವೈರಸ್​​ನಿಂದಾಗಿ ಆನ್​ಲೈನ್​ ಕ್ಲಾಸ್​​ಗಳು ಹಾಗೂ ವರ್ಕ್​ ಫ್ರಂ ಹೋಂಗೆ ಜನರು ಒಗ್ಗಿ ಹೋಗಿದ್ದಾರೆ. ಜೂಮ್​ ಹಾಗೂ ಗೂಗಲ್​ ಮೀಟ್​ ಮೂಲಕವೇ ತರಗತಿಗಳು ಹಾಗೂ ಆಫೀಸ್​ ಮೀಟಿಂಗ್ ನಡೆಸಲಾಗ್ತಿದೆ.

ಅದರಲ್ಲೂ ಆನ್​ಲೈನ್​ ಕ್ಲಾಸ್​​ನಲ್ಲಿ ವಿದ್ಯಾರ್ಥಿಗಳನ್ನ ಕಂಟ್ರೋಲ್​ ಮಾಡೋದು ಶಿಕ್ಷಕರಿಗೆ ಸುಲಭವಾದ ಕೆಲಸವಂತೂ ಅಲ್ಲವೇ ಇಲ್ಲ. ಶಿಕ್ಷಕರ ಕಣ್ತಪ್ಪಿಸಲು ವಿದ್ಯಾರ್ಥಿಗಳು ದಿನಕ್ಕೊಂದು ಪ್ಲಾನ್​ ಅನ್ನು ಹುಡುಕುತ್ತಲೇ ಇರ್ತಾರೆ.

8 ವರ್ಷದ ಬಾಲಕಿಯೊಬ್ಬಳು ತನ್ನ ಪೋಷಕರು ಹಾಗೂ ಶಿಕ್ಷಕರನ್ನ ಮೂರ್ಖರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಆನ್​​ಲೈನ್​ ಕ್ಲಾಸಿನಿಂದ ತಪ್ಪಿಸಿಕೊಳ್ಳಲು ಈಕೆ ಮಾಡಿದ ಪ್ಲಾನ್​ ಬಗ್ಗೆ ಸ್ವತಃ ಈಕೆಯ ಅಂಕಲ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಮೈಕ್​ ಎಂಬವರ ಸಹೋದರಿಯ ಪುತ್ರಿ ಜೂಮ್​ ಕ್ಲಾಸಿನಿಂದ ಲಾಗೌಟ್​ ಆಗಿದ್ದಳು. ಆದರೆ ಆಕೆಗೆ ಏನು ಮಾಡಿದ್ದರೂ ಲಾಗಿನ್​ ಆಗಲು ಸಾಧ್ಯವಾಗಿರಲಿಲ್ಲ. ಆಕೆ ಈ ಬಗ್ಗೆ ತನ್ನ ತಾಯಿ ಹಾಗೂ ಶಿಕ್ಷಕರ ಗಮನಕ್ಕೆ ತಂದಿದ್ದಳು.

ಪ್ರತಿ ಬಾರಿ ಪಾಸ್​ವರ್ಡ್​ ಹಾಕಿದಾಗಲೂ ಇದು ತಪ್ಪಾಗಿದೆ ಎಂದೇ ತೋರಿಸುತ್ತಿತ್ತು. ಶಿಕ್ಷಕರು ಹಾಗೂ ಪೋಷಕರ ಕೈಲಿ ಈ ಕೆಲಸ ಸಾಧ್ಯವಾಗದ್ದನ್ನ ಕಂಡು ಕೊನೆಗೆ ಜೂಮ್​ ಸಿಬ್ಬಂದಿಯೇ ಇದನ್ನ ಸರಿಪಡಿಸೋಕೆ ಮುಂದಾಗಿದ್ದರು.

ಈ ಬಾಲಕಿಗೆ ಜೂಮ್​ ಸಮಸ್ಯೆಯಿಂದ ಹೀಗೆ ತರಗತಿಗೆ ಭಾಗಿಯಾಗಲು ಆಗ್ತಿಲ್ಲ ಎಂದು ಶಿಕ್ಷಕರು ಮತ್ತೊಮ್ಮೆ ಪಾಠ ಮಾಡೋಕೆ ಮುಂದಾಗಿದ್ದಾರೆ. ಆದರೆ ಆಗಲೂ ಕೂಡ ಬಾಲಕಿಗೆ ತರಗತಿ ಅಟೆಂಡ್​ ಮಾಡಲು ಸಾಧ್ಯವಾಗಲಿಲ್ಲ.

ಇದೇ ರೀತಿ ಮೂರು ವಾರಗಳ ಕಾಲ ಮುಂದುವರಿದಿದೆ. ಒಂದು ದಿನ ಈ ಬಾಲಕಿ ತರಗತಿಗೆ ಹಾಜರಾಗಬೇಕಾದ ಸಂದರ್ಭದಲ್ಲೇ ಲಾಗೌಟ್​ ಆಗಿದ್ದನ್ನ ಆಕೆಯ ತಾಯಿ ಗಮನಿಸಿದ್ದಾರೆ. ಆಕೆ ಲಾಗೌಟ್​ ಆದ ಬಳಿಕ 20 ಬಾರಿ ತಪ್ಪಾದ ಪಾಸ್​ವರ್ಡ್​ನ್ನು ಟೈಪ್​ ಮಾಡಿದ್ದಾಳೆ.

ಜೂಮ್​​ ಅಪ್ಲಿಕೇಶನ್​​ನಲ್ಲಿ ಹೆಚ್ಚು ಹೆಚ್ಚು ಬಾರಿ ತಪ್ಪಾದ ಪಾಸ್​ವರ್ಡ್​ ಹಾಕುತ್ತಿದ್ದಂತೆಯೇ ಜೂಮ್​ ಕಾರ್ಯಕ್ಷಮತೆ ವಿಳಂಬವಾಗುತ್ತಾ ಹೋಗುತ್ತೆ. ಈ ಪ್ಲಾನ್​ ಬಗ್ಗೆ ತಿಳಿದುಕೊಂಡಿದ್ದ ಈ ಪೋರಿ ಬರೋಬ್ಬರಿ 3 ವಾರಗಳ ಕಾಲ ಜೂಮ್​ ಕ್ಲಾಸ್​​ಗೆ ಚಕ್ಕರ್​ ಹೊಡೆದಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...