ದಂಗಾಗಿಸುತ್ತೆ ʼಆನ್ ಲೈನ್ʼ ಕ್ಲಾಸ್ ತಪ್ಪಿಸಿಕೊಳ್ಳಲು ಈ ಪೋರಿ ಮಾಡಿದ ಪ್ಲಾನ್ 24-02-2021 10:37AM IST / No Comments / Posted In: Latest News, International ಕೊರೊನಾ ವೈರಸ್ನಿಂದಾಗಿ ಆನ್ಲೈನ್ ಕ್ಲಾಸ್ಗಳು ಹಾಗೂ ವರ್ಕ್ ಫ್ರಂ ಹೋಂಗೆ ಜನರು ಒಗ್ಗಿ ಹೋಗಿದ್ದಾರೆ. ಜೂಮ್ ಹಾಗೂ ಗೂಗಲ್ ಮೀಟ್ ಮೂಲಕವೇ ತರಗತಿಗಳು ಹಾಗೂ ಆಫೀಸ್ ಮೀಟಿಂಗ್ ನಡೆಸಲಾಗ್ತಿದೆ. ಅದರಲ್ಲೂ ಆನ್ಲೈನ್ ಕ್ಲಾಸ್ನಲ್ಲಿ ವಿದ್ಯಾರ್ಥಿಗಳನ್ನ ಕಂಟ್ರೋಲ್ ಮಾಡೋದು ಶಿಕ್ಷಕರಿಗೆ ಸುಲಭವಾದ ಕೆಲಸವಂತೂ ಅಲ್ಲವೇ ಇಲ್ಲ. ಶಿಕ್ಷಕರ ಕಣ್ತಪ್ಪಿಸಲು ವಿದ್ಯಾರ್ಥಿಗಳು ದಿನಕ್ಕೊಂದು ಪ್ಲಾನ್ ಅನ್ನು ಹುಡುಕುತ್ತಲೇ ಇರ್ತಾರೆ. 8 ವರ್ಷದ ಬಾಲಕಿಯೊಬ್ಬಳು ತನ್ನ ಪೋಷಕರು ಹಾಗೂ ಶಿಕ್ಷಕರನ್ನ ಮೂರ್ಖರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಆನ್ಲೈನ್ ಕ್ಲಾಸಿನಿಂದ ತಪ್ಪಿಸಿಕೊಳ್ಳಲು ಈಕೆ ಮಾಡಿದ ಪ್ಲಾನ್ ಬಗ್ಗೆ ಸ್ವತಃ ಈಕೆಯ ಅಂಕಲ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಮೈಕ್ ಎಂಬವರ ಸಹೋದರಿಯ ಪುತ್ರಿ ಜೂಮ್ ಕ್ಲಾಸಿನಿಂದ ಲಾಗೌಟ್ ಆಗಿದ್ದಳು. ಆದರೆ ಆಕೆಗೆ ಏನು ಮಾಡಿದ್ದರೂ ಲಾಗಿನ್ ಆಗಲು ಸಾಧ್ಯವಾಗಿರಲಿಲ್ಲ. ಆಕೆ ಈ ಬಗ್ಗೆ ತನ್ನ ತಾಯಿ ಹಾಗೂ ಶಿಕ್ಷಕರ ಗಮನಕ್ಕೆ ತಂದಿದ್ದಳು. ಪ್ರತಿ ಬಾರಿ ಪಾಸ್ವರ್ಡ್ ಹಾಕಿದಾಗಲೂ ಇದು ತಪ್ಪಾಗಿದೆ ಎಂದೇ ತೋರಿಸುತ್ತಿತ್ತು. ಶಿಕ್ಷಕರು ಹಾಗೂ ಪೋಷಕರ ಕೈಲಿ ಈ ಕೆಲಸ ಸಾಧ್ಯವಾಗದ್ದನ್ನ ಕಂಡು ಕೊನೆಗೆ ಜೂಮ್ ಸಿಬ್ಬಂದಿಯೇ ಇದನ್ನ ಸರಿಪಡಿಸೋಕೆ ಮುಂದಾಗಿದ್ದರು. ಈ ಬಾಲಕಿಗೆ ಜೂಮ್ ಸಮಸ್ಯೆಯಿಂದ ಹೀಗೆ ತರಗತಿಗೆ ಭಾಗಿಯಾಗಲು ಆಗ್ತಿಲ್ಲ ಎಂದು ಶಿಕ್ಷಕರು ಮತ್ತೊಮ್ಮೆ ಪಾಠ ಮಾಡೋಕೆ ಮುಂದಾಗಿದ್ದಾರೆ. ಆದರೆ ಆಗಲೂ ಕೂಡ ಬಾಲಕಿಗೆ ತರಗತಿ ಅಟೆಂಡ್ ಮಾಡಲು ಸಾಧ್ಯವಾಗಲಿಲ್ಲ. ಇದೇ ರೀತಿ ಮೂರು ವಾರಗಳ ಕಾಲ ಮುಂದುವರಿದಿದೆ. ಒಂದು ದಿನ ಈ ಬಾಲಕಿ ತರಗತಿಗೆ ಹಾಜರಾಗಬೇಕಾದ ಸಂದರ್ಭದಲ್ಲೇ ಲಾಗೌಟ್ ಆಗಿದ್ದನ್ನ ಆಕೆಯ ತಾಯಿ ಗಮನಿಸಿದ್ದಾರೆ. ಆಕೆ ಲಾಗೌಟ್ ಆದ ಬಳಿಕ 20 ಬಾರಿ ತಪ್ಪಾದ ಪಾಸ್ವರ್ಡ್ನ್ನು ಟೈಪ್ ಮಾಡಿದ್ದಾಳೆ. ಜೂಮ್ ಅಪ್ಲಿಕೇಶನ್ನಲ್ಲಿ ಹೆಚ್ಚು ಹೆಚ್ಚು ಬಾರಿ ತಪ್ಪಾದ ಪಾಸ್ವರ್ಡ್ ಹಾಕುತ್ತಿದ್ದಂತೆಯೇ ಜೂಮ್ ಕಾರ್ಯಕ್ಷಮತೆ ವಿಳಂಬವಾಗುತ್ತಾ ಹೋಗುತ್ತೆ. ಈ ಪ್ಲಾನ್ ಬಗ್ಗೆ ತಿಳಿದುಕೊಂಡಿದ್ದ ಈ ಪೋರಿ ಬರೋಬ್ಬರಿ 3 ವಾರಗಳ ಕಾಲ ಜೂಮ್ ಕ್ಲಾಸ್ಗೆ ಚಕ್ಕರ್ ಹೊಡೆದಿದ್ದಾಳೆ.