ಬಸ್ ಡ್ರೈವರ್ ಅಂದಾಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ..? ಖಾಕಿ ಬಣ್ಣ ಇಲ್ಲವೇ ಬಿಳಿ ಬಣ್ಣದ ಸಮವಸ್ತ್ರ ತೊಟ್ಟ ವ್ಯಕ್ತಿ ಅಲ್ಲವೇ..? ಆದರೆ ಇಂಗ್ಲೆಂಡ್ನ ಈ ಮಹಿಳಾ ಡ್ರೈವರ್ ಮಾತ್ರ ತನ್ನ ಸೌಂದರ್ಯದ ಮೂಲಕವೇ ಎಲ್ಲರ ಹುಬ್ಬೇರುವಂತೆ ಮಾಡ್ತಿದ್ದಾರೆ.
24 ವರ್ಷದ ಜೋಡ್ ಲೇಹ್ ಫಾಕ್ಸ್ ಎಂಬಾಕೆ 21 ವರ್ಷದವಳಗಾಗಿದ್ದಾಗಲೇ ಡ್ರೈವರ್ ಕೆಲಸ ಆರಂಭಿಸಿದ್ದಾಳೆ. ಬಸ್ನ ಹಿಂಭಾಗದಲ್ಲಿ ಹಾಕಿದ್ದ ಉದ್ಯೋಗಾವಕಾಶದ ಜಾಹಿರಾತನ್ನ ನೋಡಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ ಈಕೆ ಚಾಲಕಳಾಗಿ ಆಯ್ಕೆಯಾಗಿದ್ದಾಳೆ.
ಆದರೆ ಬೇಸರದ ವಿಚಾರ ಅಂದ್ರೆ ಆಕೆಗೆ ಸಹೋದ್ಯೋಗಿಗಳಲ್ಲಿ ಸ್ನೇಹಿತರನ್ನ ಕಾಣೋಕೆ ಸಾಧ್ಯವಾಗ್ತಿಲ್ಲ. ಏಕೆಂದರೆ ಆಕೆಗೆ ಸಮಾನ ವಯಸ್ಸಿನ ಯಾವೊಬ್ಬ ಸಹೋದ್ಯೋಗಿಗಳೂ ಸಿಕ್ಕಿಲ್ಲವಂತೆ. ತಾನು ಈ ಕೆಲಸವನ್ನ ತುಂಬಾನೇ ಪ್ರೀತಿಸುತ್ತಿದ್ದು ನಿವೃತ್ತಿ ಹೊಂದುವವರೆಗೂ ಕೆಲಸ ಮುಂದುವರಿಸುತ್ತೇನೆ ಎಂದು ಹೇಳಿದ್ದಾಳೆ.