ಸೀಸನ್ನ ಕೊನೆಯ ದ್ರಾಕ್ಷಿ ಗೊಂಚಲುಗಳನ್ನು ಕೀಳುವ ಭರದಲ್ಲಿದ್ದ ಕೆನಡಾದ ವಿನೋಬಲ್ ಕೋಟಿ ರೋಗ್ಮಾಂಟ್ ವೈನ್ಯಾರ್ಡ್ನ ಕೆಲಸಗಾರರಿಗೆ ಭಾರೀ ಅಚ್ಚರಿಯೊಂದು ಕಾದಿತ್ತು.
ಗುರುವಾರ ರಾತ್ರೋರಾತ್ರಿ ವೈನ್ ಯಾರ್ಡ್ಗೆ ಬಂದ ಕಳ್ಳರು ಸುಮಾರು ಅರ್ಧ ಟನ್ನಷ್ಟು ದ್ರಾಕ್ಷಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದು 300+ ಬಾಟಲಿ ವೈನ್ ತಯಾರಿಸಲು ಬೇಕಾಗುವಷ್ಟು ದ್ರಾಕ್ಷಿಯಾಗಿದೆ. ಬೆಳಿಗ್ಗೆ ವೇಳೆ ಕೆಲಸಗಾರರು ದ್ರಾಕ್ಷಿ ಸಾಲುಗಳಿಗೆ ಹೋಗಿ ದ್ರಾಕ್ಷಿಗಳನ್ನು ಕೀಳಲು ನೋಡಿದ ವೇಳೆ ಸಾಲುಗಳು ಖಾಲಿ ಇರುವುದು ಕಂಡುಬಂದಿದೆ.
5000 ಕೆನಡಾ ಡಾಲರ್ (2.8 ಲಕ್ಷ ರೂ.ಗಳು) ಮೌಲ್ಯದಷ್ಟು ದ್ರಾಕ್ಷಿಯನ್ನು ಕಿತ್ತುಕೊಂಡಿರುವ ಕಳ್ಳರು ಭಾರೀ ವ್ಯವಸ್ಥಿತ ಪಿತೂರಿಯೊಂದಿಗೆ ಈ ಕಳ್ಳತನ ನಡೆಸಿದ್ದಾರೆ.