alex Certify ಅಬ್ಬಬ್ಬಾ…! ಕಳ್ಳರು ಕದ್ದದ್ದೇನು ಅಂತ ತಿಳಿದ್ರೆ ಮೂಗಿನ ಮೇಲೆ ಬೆರಳಿಡ್ತಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ಕಳ್ಳರು ಕದ್ದದ್ದೇನು ಅಂತ ತಿಳಿದ್ರೆ ಮೂಗಿನ ಮೇಲೆ ಬೆರಳಿಡ್ತಿರಿ

ಕಳ್ಳರ ಗ್ಯಾಂಗ್​ವೊಂದು ಹೊಸ ವರ್ಷದ ಮುನ್ನಾ ದಿನದಂದು ವಿಮಾನ ನಿಲ್ದಾಣಕ್ಕೆ ನುಗ್ಗಿ ವಿಮಾನವನ್ನೇ ಕದ್ದು ಎಸ್ಕೇಪ್​ ಆದ ವಿಚಿತ್ರ ಘಟನೆ ಅರಿಜೋನಾದ ಕಾಟನ್​ವುಡ್​ನಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಠಾಣೆ ಪೊಲೀಸರು ಕಳ್ಳರು ಹಾಗೂ ವಿಮಾನಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆಗೂ ಮುನ್ನ ಕಾಟನ್​ವುಡ್​ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕಳ್ಳರು ಮುಖ್ಯ ದ್ವಾರವನ್ನ ನಿಷ್ಕ್ರಿಯಗೊಳಿಸಿ ಬಳಿಕ ಅದನ್ನ ಬಲವಂತದಿಂದ ತೆರೆಯುವ ಮೂಲಕ ವಿಮಾನ ನಿಲ್ದಾಣದ ಒಳಕ್ಕೆ ನುಗ್ಗಿದ್ದರು ಅಂತಾ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣದ ಒಳಕ್ಕೆ ನುಗ್ಗಿದ ಕಳ್ಳರು ವಿಮಾನವನ್ನ ಒಳಗೊಂಡ ಬಾಕ್ಸ್​ ಟ್ರೇಲರ್​ನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳತನವಾದ ವಸ್ತುಗಳ ಒಟ್ಟು ಮೊತ್ತ ಅಂದಾಜು 58,58,600 ಇರಬಹುದೆಂದು ಅಂದಾಜಿಸಲಾಗಿದೆ.

ಪೊಲೀಸರು ಈ ವಿಚಾರವನ್ನ ಫೇಸ್​ಬುಕ್​ ಪೋಸ್ಟ್ ಮೂಲಕ ಹಂಚಿಕೊಂಡಿದ್ದು N153PR ಸಂಖ್ಯೆಯ ಕೆಂಪು ಹಾಗೂ ಬಿಳಿ ಬಣ್ಣದ ಸಣ್ಣ ವಿಮಾನ ಎಂದು ಮಾಹಿತಿ ನೀಡಿದ್ದಾರೆ. ವಿಮಾನ ಹಾಗೂ ಕಳ್ಳರ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ಘೋಷಿಸೋದಾಗಿ ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...