ಮೂವರು ವಿದ್ಯಾರ್ಥಿನಿಯರು ವಾಸವಿದ್ದ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಲ್ಯಾಪ್ಟಾಪ್ ಬಳಸಿಕೊಂಡು ನೀಲಿ ಚಿತ್ರಗಳನ್ನ ಡೌನ್ ಲೋಡ್ ಮಾಡಿ ಸಿಕ್ಕಿಬಿದ್ದಿದ್ದು, ಆರೋಪಿಗೆ ಕ್ಯಾಲಿಫೋರ್ನಿಯಾದ ನ್ಯಾಯಾಲಯವೊಂದು 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಲ್ಯಾಪ್ಟಾಪ್ನಲ್ಲಿ ವಿಡಿಯೋ ಡೌನ್ಲೋಡ್ ಆಗುತ್ತಿದ್ದ ವೇಳೆ ಈತ ಮನೆಯಲ್ಲಿದ್ದ ತಿನಿಸುಗಳನ್ನ ತಿನ್ನುತ್ತಾ ಕೂತಿದ್ದ ಎಂದು ಚಾರ್ಜ್ಶೀಟ್ ವರದಿ ಹೇಳಿದೆ.
22 ವರ್ಷದ ಜೊನಾಥನ್ ಜೋಸ್ ರುಯೀಸ್ ಓರೆಂಜ್ ಪಟ್ಟಣದಲ್ಲಿದ್ದ ಮನೆಗೆ ನುಗ್ಗಿದ್ದು ಮಾತ್ರವಲ್ಲದೇ ಅಲ್ಲಿದ್ದ ಲ್ಯಾಪ್ಟಾಪ್ನಿಂದ ನೀಲಿ ಚಿತ್ರಗಳನ್ನ ಡೌನ್ಲೋಡ್ ಮಾಡಿದ್ದಾನೆ.
ಕೋರ್ಟ್ನಲ್ಲಿ ತಪ್ಪೊಪ್ಪಿಕೊಂಡ ಜೋನಾಥನ್ಗೆ 6 ವರ್ಷ 8 ತಿಂಗಳ ಜೈಲು ಶಿಕ್ಷೆಯನ್ನ ವಿಧಿಸಲಾಗಿದೆ. ಈ ಘಟನೆಯು 2018ರ ಅಕ್ಟೋಬರ್ ತಿಂಗಳಲ್ಲಿ ನಡೆದಿತ್ತು.
ವರದಿಗಳ ಪ್ರಕಾರ ಜೋನಾಥನ್ ಮನೆಗೆ ನುಗ್ಗಿ ನೀಲಿ ಚಿತ್ರಗಳನ್ನ ಡೌನ್ಲೋಡ್ ಮಾಡಿದ್ದು ಮಾತ್ರವಲ್ಲದೇ ಮನೆಯಲ್ಲಿದ್ದ ಹಾಲು ಕುಡಿದು ಕುಕ್ಕೀಸ್ಗಳನ್ನ ತಿಂದಿದ್ದಾನೆ.