ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಜನರು ಬೀದಿಗಳಲ್ಲಿ ಅಡ್ಡಾಡುವುದನ್ನು ನಿಯಂತ್ರಿಸುವುದಲ್ಲದೇ ಮತ್ತೊಂದು ಹೊರೆಯನ್ನು ಬ್ರಿಟನ್‌ನ ವೇಲ್ಸ್‌ನ ಅಧಿಕಾರಿಗಳು ಎದುರಿಸಬೇಕಾಗಿ ಬಂದಿದೆ.
ಕಳೆದ ವರ್ಷ ವೇಲ್ಸ್‌ನ ಲಾಂಡುಂಡೋ ಪ್ರದೇಶದಲ್ಲಿರುವ ಜನರ ಉದ್ಯಾನಕ್ಕೆ ದಾಂಗುಡಿ ಇಟ್ಟ ಮೇಕೆಗಳು ಸಂಚಾರಕ್ಕೆ ಅಡ್ಡಿಪಡಿಸಿದ್ದವು. ಈ ಘಟನೆಯ ವಿಡಿಯೋ ವೈರಲ್ ಆಗಿತ್ತು.
ಲೈಂಗಿಕ ಅಪರಾಧಗಳ ವಿಚಾರಣೆ ಮಾಡಲು ’ಸುಪ್ರಿಂ’ ಮಾರ್ಗಸೂಚಿ
ಇದೀಗ, ಕಾಡುಮೇಕೆಗಳ ಹಿಂಡೊಂದು ಇದೇ ಊರಿನ ಬೀದಿಗಳಲ್ಲಿ ಎಲ್ಲೆಂದರಲ್ಲಿ ಅಡ್ಡಾಡುತ್ತಿವೆ. ಕೋವಿಡ್ ನಿರ್ಬಂಧದ ಕಾರಣ ಈ ಮೇಕೆಗಳಿಗೆ ಜನನ ನಿರೋಧಕಗಳನ್ನು ಕೊಡಲು ಆಗಿಲ್ಲ. ಈ ಕಾರಣದಿಂದ ಮೇಕೆಗಳ ಸಂಖ್ಯೆ ಹೆಚ್ಚಾಗಿದ್ದು, ಪಟ್ಟಣದ ಬೀದಿಗಳಲೆಲ್ಲಾ ಅಡ್ಡಾಡುತ್ತಿವೆ.