ಎರಡು ಮುದ್ದಾದ ನಾಯಿಗಳು ಮನುಷ್ಯ ರೀತಿಯ ಕೆಲ ರೂಪು ರೇಖೆಗಳನ್ನ ಹೊಂದುವ ಮೂಲಕ ನೆಟ್ಟಿಗರನ್ನ ಆಶ್ಚರ್ಯಚಕಿತರನ್ನಾಗಿ ಮಾಡಿವೆ. ರೋನಿ ಹಾಗೂ ರೆಗ್ಗಿ ಎಂಬ ಹೆಸರಿನ ಈ ನಾಯಿಗಳನ್ನ ಕೆರ್ರಿ ಡಾಕ್ವ್ರಾ ಎಂಬವರು ಸಾಕುತ್ತಿದ್ದಾರೆ. ಇವು ಪಗ್ ಹಾಗೂ ಶಿಟ್ಸು ತಳಿಯಿಂದ ಜನಿಸಿದ ಮಿಶ್ರ ತಳಿ ಶ್ವಾನಗಳಾಗಿವೆ.
7 ವರ್ಷ ಪ್ರಾಯದ ಈ ಅವಳಿ ಶ್ವಾನಗಳು ತಮ್ಮ ಮುಖಚರ್ಯೆಯ ಮೂಲಕವೇ ಸುದ್ದಿಯಾಗುತ್ತಿವೆ. ಈ ಶ್ವಾನಗಳ ಮುಖ ಮನುಷ್ಯರ ಮುಖಕ್ಕೆ ಹೋಲಿಕೆ ಹೊಂದಿರೋದೇ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಈ ಶ್ವಾನಗಳು ತುಂಬಾನೇ ವಿಭಿನ್ನವಾಗಿವೆ. ಇಂತಹ ಶ್ವಾನಗಳು ನಿಮಗೆ ಇನ್ನೆಲ್ಲೂ ಕಾಣಲಿಕ್ಕಿಲ್ಲ. ಈ ಶ್ವಾನಗಳು ಮಕ್ಕಳ ಜೊತೆ ತುಂಬಾ ಚೆನ್ನಾಗಿ ಬೆರೆಯುತ್ತವೆ ಎಂದು ಶ್ವಾನದ ಮಾಲೀಕೆ ಕೆರ್ರಿ ಹೇಳಿದ್ದಾರೆ.
ಈ ಶ್ವಾನಗಳು ನೋಡೋಕೆ ಮನುಷ್ಯರ ರೀತಿ ಕಾಣೋದು ಮಾತ್ರವಲ್ಲದೇ ಮಾತನ್ನೂ ಆಡಬಲ್ಲವಂತೆ. ರೋನಿ ಮಾತನಾಡು ಎಂದು ನಾನು ಒಮ್ಮೆ ಹೇಳಿದ್ರೆ ಸಾಕು ಆಕೆ ಅದನ್ನ ಅರ್ಥ ಮಾಡಿಕೊಂಡು ಕಾರ್ಟೂನ್ಗಳಲ್ಲಿ ಬರುವ ನಾಯಿಗಳಂತೆ ಸದ್ದು ಮಾಡ್ತದೆ ಎಂದು ಕೆರ್ರಿ ಹೇಳಿದ್ರು.