ಸಾಮಾಜಿಕ ಜಾಲತಾಣದಲ್ಲಿ ಜನರು ಪರಸ್ಪರ ಮತ್ತಷ್ಟು ಹತ್ತಿರವಾಗಿರುವ ಕಾರಣ, ವಿಶಿಷ್ಟ ಪ್ರತಿಭೆಗಳಿಂದ ತಮ್ಮ ಕ್ರಿಯೇಟಿವಿಟಿಯ ದರ್ಶನ ಮಾಡಿಸಲು ಏನೇನೋ ಹೊಸದನ್ನು ಮಾಡುತ್ತಲೇ ಇರುತ್ತಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಇಡಲಾಗುವ ವ್ಯಕ್ತಿಗಳ ಲೈಫ್ ಸೈಝ್ ಪ್ರತಿಮೆಗಳೊಂದಿಗೆ ಹೊಸ ಕ್ರಿಯೇಟಿವಿಟಿಯೊಂದಿಗೆ #worldsgonemad ಟ್ಯಾಗ್ ಅಡಿ ಹೊಸ ಟ್ರೆಂಡ್ ಸೃಷ್ಟಿಯಾಗಿದೆ.
ಜಗತ್ತಿನ ವಿವಿಧೆಡೆಗಳಲ್ಲಿರುವ ಅನೇಕ ಪ್ರತಿಮೆಗಳೊಂದಿಗೆ ಜನರು ಸಂವಹನ ನಡೆಸುತ್ತಿರುವಂತೆ ಅಥವಾ ಜಗಳವಾಡುತ್ತಿರುವಂತೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಟ್ರೆಂಡ್ ಸದ್ದಿನಲ್ಲಿದೆ.