ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ನೂರಾರು ಚಿತ್ರಗಳಲ್ಲಿ, “ಚಿತ್ರದಲ್ಲಿರುವ ಹಾವನ್ನು ಗುರುತಿಸಿ” ಎನ್ನುವುದೇ ಇರುತ್ತವೆ. ಆದರೂ ಅನೇಕ ಬಾರಿ ಇದರಲ್ಲಿ ವಿಫಲವಾಗುವುದು ನೋಡಿದ್ದೇವೆ. ಇದೀಗ ಅದೇ ರೀತಿಯ ಫೋಟೋ ಒಂದು ವೈರಲ್ ಆಗಿದೆ.
ಆಸ್ಟ್ರೇಲಿಯಾದ ಸರ್ಪ ಹಿಡಿಯುವ ತಂಡವೊಂದು ಫೋಟೋ ಹಾಕಿದ್ದು, ಇದರಲ್ಲಿ ಹೆಬ್ಬಾವಿದೆ. ಆದರೆ ಎಲ್ಲಿದೆ ಎನ್ನುವುದು ಗುರುತಿಸಿ ಎನ್ನುವ ಸವಾಲು ಹಾಕಿದ್ದಾರೆ.
ಹಾವುಗಳು ಸಿಕ್ಕ ಚಿಕ್ಕ ಪ್ರದೇಶದಲ್ಲಿ ಕಣ್ಮರೆಯಾಗುತ್ತದೆ. ಈ ಹೆಬ್ಬಾವು ಸಹ ಇದೇ ರೀತಿ ಮರಗಳ ದಿಮ್ಮೆಯ ಕೆಳಗಡೆ ಅವಚಿಕೊಂಡಿದ್ದು, ಸಹಜವಾಗಿ ಅನೇಕರಿಗೆ ಇದು ಕಾಣಿಸುವುದಿಲ್ಲ. ಈ ಫೋಟೋದಲ್ಲಿಯೂ ಅನೇಕರು ಕಂಡುಹಿಡಿಯಲು ತಡಕಾಡಿದಾಗ, ಹಿಂಟ್ ನೀಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದ್ದು, ಅನೇಕರು ಹಾವಿನ ಚಾಣಾಕ್ಷತನದ ಬಗ್ಗೆ ಮಾತನಾಡಿದ್ದಾರೆ.
https://www.facebook.com/www.snakecatchers.com.au/photos/a.185721661616455/1317438051778138/?type=3
https://www.facebook.com/photo.php?fbid=1949004621901145&set=p.1949004621901145&type=3