ಕಾಂಟ್ಯಾಕ್ಟ್ ಲೆನ್ಸ್ನ್ನು ಹಾಕೋದು ಹಾಗೂ ತೆಗೆಯೋದು ಸುಲಭದ ಕೆಲಸವಂತೂ ಇಲ್ಲ. ಕೆಲವೊಮ್ಮೆ ಈ ಲೆನ್ಸ್ಗಳನ್ನ ತೆಗೆಯುವ ಭರದಲ್ಲಿ ಕಣ್ಣಿಗೆ ಹಾನಿ ಮಾಡಿಕೊಳ್ಳುವಂತಹ ಉದಾಹರಣೆಗಳನ್ನೂ ಕಂಡಿದ್ದೇವೆ.
ಯಾರಿಗೆ ಬೇಕಾದರೂ ಸೂಕ್ತವಾದ ರೀತಿಯಲ್ಲಿ ಲೆನ್ಸ್ಗಳು ಸಿಗುತ್ತವೆ ಆದರೆ ಅದನ್ನ ರಾತ್ರಿ ಮಲಗುವ ವೇಳೆ ತೆಗೆದಿಡೋದು ಎಲ್ಲರ ಕೈಲಿಂದಲೂ ಆಗುವ ಕೆಲಸವಂತೂ ಅಲ್ಲವೇ ಅಲ್ಲ.
ಆದರೆ ಟಿಕ್ಟಾಕ್ನಲ್ಲಿ ಯುವತಿಯೊಬ್ಬಳು ಲೆನ್ಸ್ಗಳನ್ನ ತೆಗೆಯುವ ಸುಲಭ ವಿಧಾನವೊಂದನ್ನ ಪರಿಚಯಿಸಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಕಷ್ಟದ ಕೆಲಸವನ್ನ ಈಕೆ ಕೆಲವೇ ಸೆಕೆಂಡ್ಗಳಲ್ಲಿ ಮಾಡಿ ತೋರಿಸಿದ್ದಾಳೆ.
ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!
ಟಿಕ್ ಟಾಕ್ ಬಳಕೆದಾರ್ತಿ ಲಾಲಾ ಎಂಬವರು ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಕಣ್ಣುಗಡ್ಡೆಯನ್ನ ತಿರುಗಿಸಿ ಬಳಿಕ ಕಣ್ಣನ್ನ ಮುಚ್ಚಿ ಈಕೆ ಲೆನ್ಸ್ನ್ನು ಹೊರತೆಗೆದಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಷ್ಟದ ಕೆಲಸಕ್ಕೆ ಪರಿಹಾರ ತಿಳಿಸಿದ್ದಕ್ಕೆ ಲಾಲಾಗೆ ಧನ್ಯವಾದ ತಿಳಿಸ್ತಿದ್ದಾರೆ. ಈ ವಿಡಿಯೋ 2 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ.