
ಇದೀಗ ಈ ಸಾಲಿಗೆ ಇಟಲಿ ದಂಪತಿಯ ಇನ್ನೊಂದು ವಿಡಿಯೋ ಸೇರಿದ್ದು ಮನಕಲಕುವಂತಿದೆ.
ಆಸ್ಪತ್ರೆಯಲ್ಲಿರುವ ತನ್ನ ಪತ್ನಿಯನ್ನ ಭೇಟಿ ಮಾಡಲು ಸಾಧ್ಯವಾಗದ ಹಿನ್ನಲೆ 81 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆ ಹೊರಗೆಯೇ ಪತ್ನಿಗೆ ಪ್ರಿಯವಾದ ವಾದ್ಯ ನುಡಿಸಿದ್ದು ವಿಡಿಯೋ ನೋಡಿದವರ ಕಣ್ಣಂಚನ್ನ ತೇವಗೊಳಿಸಿದೆ.
ಇಟಲಿಯ ಕ್ಯಾಸ್ಟೆಲ್ ಸ್ಯಾನ್ ಜಿಯೋವಾನ್ನಿ ಆಸ್ಪತ್ರೆಯಲ್ಲಿ ಯಾವುದೇ ಕೊರೊನಾ ರೋಗಿಗಳು ಇಲ್ಲದೇ ಇದ್ದರೂ ಸಹ ಸುರಕ್ಷತಾ ದೃಷ್ಟಿಯಿಂದ ಆಸ್ಪತ್ರೆಯಿಂದ ಹೊರಗೆ ಹೋಗೋಕೆ ಅನುಮತಿ ನಿರಾಕರಿಸಲಾಗಿದೆ.
ಹೀಗಾಗಿ ತನ್ನ ಪತ್ನಿ ಕಾರ್ಲಾ ಸಾಚಿಯನ್ನ ಭೇಟಿ ಮಾಡಲು ಸಾಧ್ಯವಾಗದ ಹಿನ್ನೆಲೆ ಸ್ಟೆಫಾನೋ ಆಸ್ಪತ್ರೆ ಕಟ್ಟಡದ ಹೊರಗಿನ ರಸ್ತೆಯಲ್ಲಿ ಕುಳಿತು ತಮ್ಮ ಪತ್ನಿಗಾಗಿ ವಾದ್ಯ ನುಡಿಸುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಕಟ್ಟಡದ ಎರಡನೇ ಮಹಡಿಯ ಕಿಟಕಿ ಬಳಿ ನಿಂತು ತನ್ನ ಪತಿಯನ್ನ ಕಣ್ತುಂಬಿಕೊಂಡಿದ್ದಾರೆ.