
ಕಮಲಾ ಉಪಧ್ಯಕ್ಷ ಸ್ಥಾನವನ್ನ ಗೆದ್ದರೆ – ‘ನಂಬರ್ ಒನ್ ಅಬ್ಸರ್ವೇಟರಿ ಸರ್ಕಲ್’ನಲ್ಲಿ ವಾಸ ಮಾಡುತ್ತಾರೆ- ಮತ್ತು ಇದು ಯುಎಸ್ ನೇವಲ್ ಅಬ್ಸರ್ವೇಟರಿಯ ಮೈದಾನದಲ್ಲಿದೆ, ವಾಷಿಂಗ್ಟನ್ ಡಿಸಿಯ ಶ್ವೇತಭವನದಿಂದ ಕೆಲವೇ ಮೈಲಿ ದೂರದಲ್ಲಿದೆ.
19ನೇ ಶತಮಾನದಲ್ಲಿ ನಿರ್ಮಾಣವಾದ ಈ ಅರಮನೆ ಜಾಗ 12 ಎಕರೆ ವಿಸ್ತೀರ್ಣ ಹೊಂದಿದೆ. 1983ರಲ್ಲಿ ವೀಕ್ಷಣಾಲಯದ ಅಧೀಕ್ಷಕರ ನಿವಾಸ ಅಂತಾ ಕರೆಯಲಾಗುತ್ತಿತ್ತು. 1924ರ ಬಳಿಕ ಇದನ್ನ ನೌಕಾ ಕಾರ್ಯಾಚರಣೆಯ ಮುಖ್ಯಸ್ಥರಿಗೆ ನೀಡಲಾಯ್ತು. ಸುಮಾರು 50 ವರ್ಷಗಳ ಹಿಂದೆ ವಾಲ್ಟರ್ ಮೊಂಡೆಲ್ ಮತ್ತವರ ಕುಟುಂಬ ಈ ಮನೆಗೆ ಸ್ಥಳಾಂತರಗೊಂಡ ಬಳಿಕ ಇದನ್ನ ಅಮೆರಿಕ ಉಪಾಧ್ಯಕ್ಷರ ನಿವಾಸ ಅಂತಾ ತೀರ್ಮಾನ ಮಾಡಲಾಯ್ತು.