alex Certify ಹೃದಯಸ್ಪರ್ಶಿಯಾಗಿದೆ ಸಾವಿನಂಚಿನಲ್ಲಿದ್ದ ವೃದ್ಧನ ಕೊನೆಯ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಸ್ಪರ್ಶಿಯಾಗಿದೆ ಸಾವಿನಂಚಿನಲ್ಲಿದ್ದ ವೃದ್ಧನ ಕೊನೆಯ ಭೇಟಿ

ಆತ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಮರಣ ಶಯ್ಯೆಯಲ್ಲಿದ್ದ. ಸಾಕಷ್ಟು ನಿರ್ಬಂಧಗಳ ನಡುವೆಯೂ ತಮ್ಮ ಕುಟುಂಬದವರನ್ನು ಭೇಟಿಯಾಗಿ ಮಾತನಾಡಿದ. ಅದಕ್ಕೆ ಸಹಕಾರಿಯಾಗಿದ್ದು ಫೈರ್ ಇಂಜಿನ್!

ಅಚ್ಚರಿಯಾದರೂ ಸತ್ಯ. 87 ವರ್ಷದ ಹೆನ್ರಿ ನಿಜೋವ್ ಮಾರ್ಚ್ 19ರಿಂದ ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹೆಚ್ಚು ದಿನ ಬದುಕಲಾರರು ಎಂದು ವೈದ್ಯರು ಹೇಳಿದ್ದರು. ಅವರಿಗೆ ಕೋವಿಡ್ -19 ರೋಗವೇನೂ ಇರಲಿಲ್ಲ. ಆದರೂ ಎಲ್ಲಡೆ ಕರೋನಾ ಆತಂಕವಿರುವುದರಿಂದ ಮನೆಯವರು ಹೆನ್ರಿ ಅವರನ್ನು ಭೇಟಿ ಮಾಡಿ ಮಾತನಾಡಲು ಸಾಧ್ಯವಿರಲಿಲ್ಲ. ರೋಗಿಗಳ ಭೇಟಿಗೆ ಆಸ್ಪತ್ರೆ ನಿರ್ಬಂಧ ಹೇರಿತ್ತು.

ಹೆನ್ರಿ ಮನೆಯವರು ಆಮ್ಸ್ಟರ್ಡಮ್ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಸಹಾಯ ಕೋರಿದರು. ಅಗ್ನಿಶಾಮಕ ಸಿಬ್ಬಂದಿ ಕೋರಿಕೆಗೆ ಒಪ್ಪಿದರು. ಅಗ್ನಿಶಾಮಕ ವಾಹನದ ಏಣಿಯ ಮೇಲೆ ಹೆನ್ರಿ ಮನೆಯವರನ್ನು ಕೂರಿಸಿಕೊಂಡು ಅವರಿದ್ದ ಆಸ್ಪತ್ರೆಯ ನಾಲ್ಕನೇ ಮಹಡಿಯ ಕಿಟಕಿ ಬಳಿ ನಿಲ್ಲಿಸಲಾಯಿತು. ಆಸ್ಪತ್ರೆಯ ನಿಯಮವನ್ನೂ ಮುರಿಯದೇ ಕುಟುಂಬಸ್ಥರು ಅಜ್ಜ ಹೆನ್ರಿ ಜತೆ ಕಿಟಕಿಯಿಂದಲೇ ಮಾತನಾಡಿದರು. ಕೊನೆಯ ವಿದಾಯ ಹೇಳಿದರು.

ನಮಗೆ ಸುಂದರವಾಗಿ ಪತ್ರ ಬರೆಯಲು ಬಾರದು. ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ನಮ್ಮ ಪರಿಸ್ಥಿತಿ ಹೇಳಿಕೊಂಡೆವು. ಅವರು ನಮಗೆ ಸಹಕರಿಸಿದ್ದು, ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಹೆನ್ರಿ ಅವರ‌ ಮೊಮ್ಮಗಳು ಚಾಂತೆ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...