
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ಡಬ್ಲೂ ಜಾಗದಲ್ಲಿ ಬಿ ಅಕ್ಷರವನ್ನ ಇರಿಸಲಾಗಿದೆ. ಹಾಗೂ ಡಿ ಅಕ್ಷರದಲ್ಲಿ ಕೊಂಚ ಬದಲಾವಣೆ ಮಾಡಿ ಬಿ ಎಂದು ಬರೆಯಲಾಗಿದೆ.
ಮಧ್ಯಾಹ್ನ 1 :15ರ ಸುಮಾರಿಗೆ ಐವರು ಪುರುಷರು ಹಾಗೂ ಓರ್ವ ಮಹಿಳೆಯನ್ನೊಳಗೊಂಡ ತಂಡ ಈ ಕೆಲಸ ಮಾಡಿದ್ದನ್ನ ಎಲ್ಎಪಿಡಿ ಭದ್ರತಾ ಸಿಬ್ಬಂದಿ ಗಮನಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಆದರೆ ಈ ಆರು ಮಂದಿ ಹಾಲಿವುಡ್ ಚಿಹ್ನೆಗೆ ಯಾವುದೇ ಹಾನಿ ಉಂಟು ಮಾಡಿಲ್ಲ. ಹೀಗಾಗಿ ಇದನ್ನ ಅಪರಾಧ ಎಂದು ಹೇಳಲಾಗೋಲ್ಲ ಎಂದು ಎಲ್ಎಪಿಡಿ ಕ್ಯಾಪ್ಟನ್ ಹೇಳಿದ್ದಾರೆ.
ಹಾಲಿಬಾಬ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸ್ತನ ಕ್ಯಾನ್ಸರ್ ಬಗೆಗಿನ ಜಾಗೃತಿಯನ್ನ ಪ್ರಶಂಸಿಸಿದ್ದಾರೆ.