alex Certify ಹೀಗೂ ಮಾಡಬಹುದು ನಿರಾಶ್ರಿತರಿಗೆ ಸಹಾಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೂ ಮಾಡಬಹುದು ನಿರಾಶ್ರಿತರಿಗೆ ಸಹಾಯ..!

The 'Giving Tree' In Real Life: Reddit Post Shows Donation For Homeless in Innovative Way

ಪ್ರಕೃತಿ ವಿಕೋಪ ಅನ್ನೋದು ಎಲ್ಲಾದರೊಂದು ಕಡೆ ಸಂಭವಿಸ್ತಾನೇ ಇರುತ್ತೆ. ಇಂತಹ ಸಮಯದಲ್ಲಿ ಮನೆಯನ್ನ ಕಳೆದುಕೊಂಡವರಿಗೆ ದಾನದ ರೂಪದಲ್ಲಿ ಅನೇಕರು ಸಹಾಯ ಮಾಡ್ತಾರೆ. ಕಲಿಯುಗದಂತ ಈ ಕಾಲದಲ್ಲೂ ನಮ್ಮಲ್ಲಿ ಮಾನವೀಯ ಮೌಲ್ಯಗಳುಳ್ಳ ಜನರು ಬದುಕಿದ್ದಾರೆ ಅಂದ್ರೆ ನಾವು ಆ ಮಾತನ್ನ ತಳ್ಳಿ ಹಾಕೋ ಹಾಗಿಲ್ಲ.

ಯಾರಿಗೋ ಬೇಡವಾದ ವಸ್ತು ಇನ್ಯಾರದ್ದೋ ಪಾಲಿಗೆ ದೊಡ್ಡ ಆಸ್ತಿಯಾಗಿರಬಹುದು. ಇಂತಹ ಒಂದು ಅಭಿಯಾನ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಉಳ್ಳವರು ತಮಗೆ ಬೇಡವಾದ ವಸ್ತುಗಳನ್ನ ಮರಕ್ಕೆ ಸಿಕ್ಕಿಸುತ್ತಾರೆ. ಅದರಲ್ಲಿದ್ದ ವಸ್ತುಗಳು ನಿರಾಶ್ರಿತರಾಗಿ ಬೇಕಾದರೆ ಅವರು ತೆಗೆದುಕೊಂಡು ಹೋಗಬಹುದು.

ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಆಗಿರೋ ಈ ಫೋಟೋದಲ್ಲಿ ಮರಕ್ಕೆ ಉಚಿತ ಮರ ಅಂತಾ ನಾಮಕರಣ ಮಾಡಲಾಗಿದೆ. ಈ ಮರಕ್ಕೆ ಆಹಾರಗಳನ್ನ, ಬಟ್ಟೆಗಳನ್ನ, ಗೃಹೋಪಯೋಗಿ ವಸ್ತುಗಳನ್ನ ನೇತು ಹಾಕಲಾಗಿದೆ. ನಿರಾಶ್ರಿತರು ಈ ಮರದ ಬಳಿಗೆ ಬಂದು ತಮಗೆ ಬೇಕಾದ ವಸ್ತುಗಳನ್ನ ತೆಗೆದುಕೊಂಡು ಹೋಗಬಹುದಂತೆ. ಆದರೆ ಈ ಫೋಟೋವನ್ನ ಶೇರ್​ ಮಾಡಿರುವ ವ್ಯಕ್ತಿ ಇದು ಯಾವ ದೇಶದ ಫೋಟೋ ಅನ್ನೋದನ್ನ ಬಹಿರಂಗ ಮಾಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...