ಪ್ರಕೃತಿ ವಿಕೋಪ ಅನ್ನೋದು ಎಲ್ಲಾದರೊಂದು ಕಡೆ ಸಂಭವಿಸ್ತಾನೇ ಇರುತ್ತೆ. ಇಂತಹ ಸಮಯದಲ್ಲಿ ಮನೆಯನ್ನ ಕಳೆದುಕೊಂಡವರಿಗೆ ದಾನದ ರೂಪದಲ್ಲಿ ಅನೇಕರು ಸಹಾಯ ಮಾಡ್ತಾರೆ. ಕಲಿಯುಗದಂತ ಈ ಕಾಲದಲ್ಲೂ ನಮ್ಮಲ್ಲಿ ಮಾನವೀಯ ಮೌಲ್ಯಗಳುಳ್ಳ ಜನರು ಬದುಕಿದ್ದಾರೆ ಅಂದ್ರೆ ನಾವು ಆ ಮಾತನ್ನ ತಳ್ಳಿ ಹಾಕೋ ಹಾಗಿಲ್ಲ.
ಯಾರಿಗೋ ಬೇಡವಾದ ವಸ್ತು ಇನ್ಯಾರದ್ದೋ ಪಾಲಿಗೆ ದೊಡ್ಡ ಆಸ್ತಿಯಾಗಿರಬಹುದು. ಇಂತಹ ಒಂದು ಅಭಿಯಾನ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಉಳ್ಳವರು ತಮಗೆ ಬೇಡವಾದ ವಸ್ತುಗಳನ್ನ ಮರಕ್ಕೆ ಸಿಕ್ಕಿಸುತ್ತಾರೆ. ಅದರಲ್ಲಿದ್ದ ವಸ್ತುಗಳು ನಿರಾಶ್ರಿತರಾಗಿ ಬೇಕಾದರೆ ಅವರು ತೆಗೆದುಕೊಂಡು ಹೋಗಬಹುದು.
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿರೋ ಈ ಫೋಟೋದಲ್ಲಿ ಮರಕ್ಕೆ ಉಚಿತ ಮರ ಅಂತಾ ನಾಮಕರಣ ಮಾಡಲಾಗಿದೆ. ಈ ಮರಕ್ಕೆ ಆಹಾರಗಳನ್ನ, ಬಟ್ಟೆಗಳನ್ನ, ಗೃಹೋಪಯೋಗಿ ವಸ್ತುಗಳನ್ನ ನೇತು ಹಾಕಲಾಗಿದೆ. ನಿರಾಶ್ರಿತರು ಈ ಮರದ ಬಳಿಗೆ ಬಂದು ತಮಗೆ ಬೇಕಾದ ವಸ್ತುಗಳನ್ನ ತೆಗೆದುಕೊಂಡು ಹೋಗಬಹುದಂತೆ. ಆದರೆ ಈ ಫೋಟೋವನ್ನ ಶೇರ್ ಮಾಡಿರುವ ವ್ಯಕ್ತಿ ಇದು ಯಾವ ದೇಶದ ಫೋಟೋ ಅನ್ನೋದನ್ನ ಬಹಿರಂಗ ಮಾಡಿಲ್ಲ.