ನಾಳೆ ಅಮೆರಿಕ ಅಧ್ಯಕ್ಷ ಸ್ಥಾನದ ಪಟ್ಟದಿಂದ ಕೆಳಗಿಳಿಯಲಿರುವ ಡೊನಾಲ್ಡ್ ಟ್ರಂಪ್ರನ್ನ ಹೋಲುವ ಕೇಸರಿ ಬಣ್ಣದ ಹೀಲಿಯಂ ತುಂಬಿದ ದೊಡ್ಡ ಬಲೂನ್ ಲಂಡನ್ನ ಜನಪ್ರಿಯ ವಸ್ತು ಸಂಗ್ರಹಾಲಯವನ್ನು ಸೇರಲಿದೆ.
ಈ ಬೇಬಿ ಟ್ರಂಪ್ ಆಕೃತಿಯ ಬಲೂನುಗಳನ್ನ 2018ರಲ್ಲಿ ಬ್ರಿಟಿಷ್ ಕಲಾವಿದ ಮ್ಯಾಥ್ಯೂ ಬೋನರ್ ಎಂಬವರು ರಚಿಸಿದ್ದಾರೆ. ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್ ಯುನೈಟೆಡ್ ಕಿಂಗ್ಡಮ್ ಭೇಟಿಯನ್ನ ವಿರೋಧಿಸಿ ಲಂಡನ್ನ ಪಾರ್ಲಿಮೆಂಟ್ ಸ್ಕ್ವೇರ್ ಮೇಲೆ ಮೊದಲ ಬಾರಿಗೆ ಹಾರಿಸಲಾಗಿತ್ತು.
ಇದಾದ ಬಳಿಕ ಈ ಬಲೂನು ಫ್ರಾನ್ಸ್, ಅರ್ಜೆಂಟೀನಾ, ಐರ್ಲೆಂಡ್ ಹಾಗೂ ಡೆನ್ಮಾರ್ಕ್ನಂತಹ ಅನೇಕ ಕಡೆ ಕಂಡು ಬಂದಿದೆ. ಜಗತ್ತನ್ನೇ ಪ್ರವಾಸ ಮಾಡಿ ಬಂದ ಬೇಬಿ ಟ್ರಂಪ್ ಬಲೂನು ಇದೀಗ ಅಂತಿಮ ವಿಶ್ರಾಂತಿ ಸ್ಥಳವಾದ ಲಂಡನ್ ಮ್ಯೂಸಿಯಂ ಸೇರಲಿದೆ. ಮ್ಯೂಸಿಯಂನಲ್ಲಿ ಈ ಬೇಬಿ ಟ್ರಂಪ್ನ್ನು ಸಂರಕ್ಷಿಡಲಾಗುವುದು ಎಂದು ಮ್ಯೂಸಿಯಂ ಪ್ರಕಟಣೆಯಲ್ಲಿ ತಿಳಿಸಿದೆ.
ಬೇಬಿ ಟ್ರಂಪ್ ಬಲೂನ್ ಮ್ಯೂಸಿಯಂನಲ್ಲಿ ಪ್ರತಿಭಟನಾ ಸಂಗ್ರಹದ ಒಂದು ಭಾಗವಾಗಿರಲಿದೆ.