
ಚೀನಾದ ಸುದ್ದಿ ಏಜೆನ್ಸಿ ಪೀಪಲ್ಸ್ ಡೇಲಿ ತನ್ನ ಪೇಜ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಮಹಿಳೆ ಕೆಳಗೆ ಸಿಕ್ಕಿಹಾಕಿಕೊಂಡಿರುವ ಸ್ಥಳಕ್ಕೆ ಓಡೋಡಿ ಬಂದ ಡೆಲಿವರಿ ಹುಡುಗರನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಕೇವಲ 11 ಸೆಕೆಂಡ್‌ಗಳ ಒಳಗೆ ಈ ಹುಡುಗರೆಲ್ಲಾ ಸೇರಿಕೊಂಡು ಕಾರನ್ನು ತಳ್ಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಅಪಘಾತದಲ್ಲಿ ಮಹಿಳೆ ಬದುಕುಳಿದಿದ್ದಾರೋ ಇಲ್ಲವೋ ಎಂಬುದು ಇನ್ನೂ ಅನೇಕರಿಗೆ ತಿಳಿದುಬಂದಿಲ್ಲ.