ಬರೋಬ್ಬರಿ 7000 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಕೆಟಮೈನ್ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದ ಥಾಯ್ಲೆಂಡ್ ಇದೀಗ ತನ್ನ ಹೇಳಿಕೆ ಬದಲಿಸಿದೆ.
ನಾವು ವಶಪಡಿಸಿಕೊಂಡ ವಸ್ತು ಡ್ರಗ್ ಅಲ್ಲ ಎಂಬುದು ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಥಾಯ್ಲೆಂಡ್ ಕಾನೂನು ಸಚಿವರು ಹೇಳಿದ್ದಾರೆ.
ನಮ್ಮ ಸಂಸ್ಥೆಯ ತಪ್ಪು ತಿಳುವಳಿಕೆಯಿಂದ ಈ ಪ್ರಮಾದವಾಗಿದೆ. ನಾವು ಕೆಟಮೈನ್ ಎಂದು ನಂಬಿದ್ದ ವಶಪಡಿಸಿಕೊಂದ ವಸ್ತುವಿನ ಪರೀಕ್ಷೆ ವೇಳೆ ಅದು ಡ್ರಗ್ ಎಲ್ಲ ಎಂಬ ವಿಚಾರ ಗೊತ್ತಾಗಿದೆ ಅಂತಾ ಸೋಮಾಕ್ಸ್ ಹೇಳಿದ್ದಾರೆ.
ಕೆಟಮೈನ್ನ್ನ ಸೌಂದರ್ಯ ಅಥವಾ ಖಿನ್ನತೆ ಶಮನಕ್ಕೆ ವ್ಯಾಪಕವಾಗಿ ಬಳಸಲಾಗುತ್ತೆ. ಇದನ್ನ ಪಾರ್ಟಿ ಡ್ರಗ್ ಎಂದೂ ಕರೆಯಲಾಗುತ್ತೆ. ಇದನ್ನ ನಿಗದಿತ ಪ್ರಮಾಣಕ್ಕಿಂತ ಅತಿಯಾಗಿ ಸೇವನೆ ಮಾಡಿದರೆ ದೇಹಕ್ಕೆ ಭಾರೀ ಪ್ರಮಾಣದಲ್ಲಿ ಅನಾಹುತ ಉಂಟು ಮಾಡಬಲ್ಲುದು.