alex Certify ಸಮುದ್ರದಲ್ಲಿ ಆಡುತ್ತಿದ್ದ ವೇಳೆ ಬಾಲಕಿಯ ಸಮೀಪವೇ ಬಂದ ಶಾರ್ಕ್​..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಲ್ಲಿ ಆಡುತ್ತಿದ್ದ ವೇಳೆ ಬಾಲಕಿಯ ಸಮೀಪವೇ ಬಂದ ಶಾರ್ಕ್​..! ವಿಡಿಯೋ ವೈರಲ್​

ಹವಾಯಿಯ ಕಲಮಾ ಸಮುದ್ರದಲ್ಲಿ ಆಡುತ್ತಿದ್ದ 6 ವರ್ಷದ ಬಾಲಕಿಯ ಸಮೀಪದಲ್ಲೇ ಶಾರ್ಕ್​ ಬಂದಿದ್ದು ಈ ಶಾಕಿಂಗ್​ ದೃಶ್ಯ ಮಗುವಿನ ತಾಯಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

ಶೆರಿ ಎಂಬ ಹೆಸರಿನ ಮಹಿಳೆ ಸಮುದ್ರದಲ್ಲಿ ಆಟವಾಡುತ್ತಿದ್ದ ಮಗಳ ಚಟುವಟಿಕೆಯನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದರು. ಕೂಡಲೇ ಮಗಳು ಕಿರುಚುತ್ತಾ ತಾನಿದ್ದ ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ಅಲ್ಲದೇ ಆಕೆ ಶಾರ್ಕ್​ ಕಂಡಿದ್ದೇನೆ ಎಂದು ಹೇಳಿದ್ದಾಳೆ.

ಹಂಸದ ಮುಖಕ್ಕೆ ಸಾಕ್ಸ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು..!

ನಾನು ಶಾರ್ಕ್​ನ್ನು ನೋಡಿದೆ. ಅದು ನನ್ನ ಹಿಂದೆಯೇ ಇದ್ದರೂ ಸಹ ನಾನು ಗಮನಿಸಿಯೇ ಇರಲಿಲ್ಲ. ನಾನು ತುಂಬಾನೇ ಭಯಗೊಂಡಿದ್ದೆ. ಹಾಗೂ ಅಲ್ಲಿಂದ ಓಡಲು ಆರಂಭಿಸಿದೆ ಎಂದು 6 ವರ್ಷದ ಬಾಲಕಿ ಹೇಳಿದ್ದಾಳೆ.

ಇನ್ನು ಈ ವಿಡಿಯೋ ನೋಡಿದ ತಜ್ಞರು ಬಹುಶಃ ಇದು ಬ್ಲಾಕ್​ಟಿಪ್​ ಶಾರ್ಕ್ ಇರಬಹುದು ಎಂದು ಅಂದಾಜಿಸಿದ್ದಾರೆ. ಇವುಗಳು ಆಳ ಸಮುದ್ರದಲ್ಲಿ ಚಿಕ್ಕ ಮೀನುಗಳಿಗಾಗಿ ಹೊಂಚು ಹಾಕುತ್ತಾ ಇರುತ್ತವೆಯಂತೆ. ಈ ಶಾರ್ಕ್​ ಬಹುಶಃ ಆ ಬಾಲಕಿಯ ಜೀವಕ್ಕೆ ಅಪಾಯ ಮಾಡುತ್ತಿರಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

https://youtu.be/4-PN4i2NBtw?t=27

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...