alex Certify ಹಂಸದ ಮುಖಕ್ಕೆ ಸಾಕ್ಸ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಂಸದ ಮುಖಕ್ಕೆ ಸಾಕ್ಸ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು..!

ತನಗೆ ಮನರಂಜನೆ ಸಿಗಬೇಕು ಅಂತಾ ಮನುಷ್ಯ, ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡಿದ ಅನೇಕ ಪ್ರಕರಣಗಳನ್ನ ನಾವು ಕಂಡಿದ್ದೇವೆ. ಇದೀಗ ಇದೇ ಸಾಲಿಗೆ ಇನ್ನೊಂದು ಘಟನೆ ಸೇರಿದ್ದು ಇಲ್ಲಿ ಹಂಸದ ಮುಖಕ್ಕೆ ಸಾಕ್ಸ್​ನ್ನು ಹಾಕಿ ಹಿಂಸಿಸಲಾಗಿದೆ.

ಬ್ರಿಟನ್​​ನ ನದಿಯೊಂದರಲ್ಲಿ ಹಂಸದ ಮುಖಕ್ಕೆ ಕಪ್ಪು ಬಣ್ಣದ ಸಾಕ್ಸ್ ಹಾಕುವ ಮೂಲಕ ಹಿಂಸಿಸಲಾಗಿದೆ.

ಅದೃಷ್ಟವಶಾತ್​ ಆ ಹಂಸವು ಉಸಿರುಗಟ್ಟಿ ಸಾಯುವ ಮುನ್ನ ಅದನ್ನ ರಕ್ಷಣೆ ಮಾಡಲಾಗಿದೆ.

ಈ ರೀತಿ ಚರಂಡಿಯಲ್ಲಿ ಮುಖಕ್ಕೆ ಸಾಕ್ಸ್ ಹಾಕಿಕೊಂಡು ಒದ್ದಾಡುತ್ತಿದ್ದ ಹಂಸವನ್ನ ಗಮನಿಸಿದ ದಾರಿಹೋಕರೊಬ್ಬರು ಹಂಸಗಳ ರಕ್ಷಣಾ ಆಸ್ಪತ್ರೆಗೆ ಮಾಹಿತಿ ನೀಡಿದ್ರು. ರಕ್ಷಣಾ ಕಾರ್ಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಹಂಸವನ್ನ ರಕ್ಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಕ್ಸ್​ ಹಂಸದ ಕುತ್ತಿಗೆಗೆ ಬಿಗಿಯಾಗಿದ್ದರಿಂದ ಅದು ಉಸಿರಾಡಲು ಸಮಸ್ಯೆ ಅನುಭವಿಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಈ ಸಂಬಂಧ ಇದೀಗ ಪ್ರಕರಣ ದಾಖಲಾಗಿದ್ದು ಈ ಕುಚೇಷ್ಟೆ ಮಾಡಿದ ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಯಾರಾದರೂ ಈ ಘಟನೆಗೆ ಸಾಕ್ಷಿಯಾದವರಿದ್ದಲ್ಲಿ ಪ್ರಕರಣ ಭೇದಿಸಲು ನೆರವಾಗಿ ಎಂದು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...