ಶ್ವಾನವನ್ನ ಸಾಕಿದವರಿಗೆ ಮಾತ್ರ ಅದರ ಪ್ರೀತಿ ಏನು ಅನ್ನೋದು ಗೊತ್ತಿರುತ್ತೆ. ಹೀಗಾಗಿ ಶ್ವಾನಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನೂ ಮಾಲೀಕ ಪೂರೈಸುತ್ತಾನೆ.
ಆದರೆ ಮಾಲೀಕನೇ ಸಾವಿಗೀಡಾದ್ರೆ ಶ್ವಾನದ ಕತೆಯೇನು..? ಎಂಬ ಪ್ರಶ್ನೆ ಮೂಡೋದು ಸಹಜ. ಆದರೆ ಇಲ್ಲೊಬ್ಬ ಉದ್ಯಮಿ ತನ್ನ ಆಸ್ತಿಯಲ್ಲಿ 5 ಮಿಲಿಯನ್ ಡಾಲರ್ ಹಣವನ್ನ ಸಾಕು ಶ್ವಾನದ ಆರೈಕೆಗೆ ಮೀಸಲಿಟ್ಟಿದ್ದಾನೆ ಎನ್ನಲಾಗಿದೆ.
ಬಾರ್ಡರ್ ಕೊಲ್ಲಿ ಜಾತಿಗೆ ಸೇರಿದ 8 ವರ್ಷದ ಲುಲು ಎಂಬ ಶ್ವಾನದ ಮಾಲೀಕ ಬಿಲ್ ಡೋರೀಸ್ ಕಳೆದ ವರ್ಷ ನಿಧನರಾಗಿದ್ದಾರೆ. ಅವಿವಾಹಿತನಾಗಿದ್ದ ಈ ಉದ್ಯಮಿ ತನ್ನ ಆಸ್ತಿಯನ್ನ ಶ್ವಾನದ ಆರೈಕೆಗೆ ಮೀಸಲಿಟ್ಟಿದ್ದಾನೆ ಎನ್ನಲಾಗಿದೆ.
ಸಧ್ಯ ಈ ಶ್ವಾನವನ್ನ ಮಾರ್ಥಾ ಬರ್ಟೋನ್ ಎಂಬವರು ನೋಡಿಕೊಳ್ತಿದ್ದಾರೆ. ಡೋರೀಸ್ ತನ್ನ ಆಸ್ತಿ ಪತ್ರದಲ್ಲಿ ತನ್ನ ಹಣವನ್ನ ಟ್ರಸ್ಟ್ ಒಂದರಲ್ಲಿ ಇಡಬೇಕು ಹಾಗೂ ಈ ಹಣವನ್ನ ಲುಲು ಆರೈಕೆಗೆ ಬಳಕೆ ಮಾಡಬೇಕು ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಆತ ಈ ಹೆಣ್ಣು ಶ್ವಾನವನ್ನ ತುಂಬಾನೇ ಪ್ರೀತಿಸುತ್ತಿದ್ದ ಎಂದು ಶ್ವಾನದ ಆರೈಕೆ ಮಾಡುತ್ತಿರುವ ಮಾರ್ಥಾ ಬರ್ಟೋನ್ ಹೇಳಿದ್ದಾರೆ.