alex Certify ಅಚ್ಚರಿ…! ಪ್ರೀತಿಯ ಆಹಾರದ ಹೆಸರು ಕೇಳಿ ಕೋಮಾದಿಂದ ಎದ್ದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿ…! ಪ್ರೀತಿಯ ಆಹಾರದ ಹೆಸರು ಕೇಳಿ ಕೋಮಾದಿಂದ ಎದ್ದ ಯುವಕ

ಜೀವಮಾನ ಪೂರ್ತಿ ಕೊಟ್ಟರು ತಿನ್ನಬಲ್ಲೆ ಅನ್ನೋವಷ್ಟರ ಮಟ್ಟಿಗೆ ನಿಮಗೆ ಇಷ್ಟವಾಗುವ ಆಹಾರ ಯಾವುದಾದ್ರೂ ಇದೆಯಾ? ನೀವು ಪ್ರಜ್ಞೆ ತಪ್ಪಿ ಬಿದ್ದ ಸಂದರ್ಭದಲ್ಲಿ ಅದೊಂದು ತಿಂಡಿಯ ಹೆಸರು ಹೇಳಿದ್ರೆ ಸಾಕು ನಾನು ಜಾಗೃತನಾಗುವೆ ಎಂಬಷ್ಟರ ಮಟ್ಟಿಗೆ ಯಾವುದಾದರೂ ಆಹಾರವನ್ನ ಇಷ್ಟಪಟ್ಟಿದುಂಟಾ..?

ಆಹಾರ ಪದಾರ್ಥಗಳು ಮನುಷ್ಯನ ಆರೋಗ್ಯ ಹಾಗೂ ಮೂಡ್​ನ್ನ ಸುಧಾರಿಸುವ ಸಾಮರ್ಥ್ಯ ಹೊಂದಿವೆ. ಆದರೆ ತೈವಾನ್​ನಲ್ಲಿ ಆಹಾರ ಪದಾರ್ಥದ ಹೆಸರೊಂದು ಕೋಮಾದಲ್ಲಿದ್ದ ಯುವಕನನ್ನ ಎಚ್ಚರಿಸಿದೆ.

62 ದಿನಗಳಿಂದ ಕೋಮಾದಲ್ಲಿದ್ದ 18 ವರ್ಷದ ಯುವಕ ಆತನ ಇಷ್ಟವಾದ ಖಾದ್ಯವಾದ ಚಿಕನ್​ ಫಿಲೆಟ್ಸ್ ಹೆಸರು ಕೇಳುತ್ತಿದ್ದಂತೆಯೇ ಕೋಮಾದಿಂದ ಹೊರಬಂದಿದ್ದಾನಂತೆ. ಬೈಕ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಿಯು ಕೋಮಾಗೆ ಜಾರಿದ್ದ ಎನ್ನಲಾಗಿದೆ.

ಆಸ್ಪತ್ರೆ ಸಿಬ್ಬಂದಿ ಸಾಕಷ್ಟು ಪ್ರಯತ್ನದ ನಡುವೆಯೂ ಕೋಮಾದಿಂದ ಹೊರಬಾರದ ಚಿಯು ಇದೀಗ ಆತನ ಸಹೋದರ ಚಿಕನ್​ ಫಿಲ್ಲೆಟ್ಸ್ ಎಂಬ ಹೆಸರು ಹೇಳ್ತಿದ್ದಂತೆಯೇ ಕಣ್ಣು ಬಿಡೋ ಮೂಲಕ ವೈದ್ಯ ಲೋಕಕ್ಕೇ ಅಚ್ಚರಿ ಮೂಡಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...