ರಸ್ತೆ ಅಪಘಾತದಲ್ಲಿ ಮೆದುಳು ಸ್ವಾಧೀನ ಕಳೆದುಕೊಂಡಿದ್ದ ಯುವಕನ ದೇಹದ ಅಂಗಾಂಗಗಳನ್ನ ದಾನ ಮಾಡುವ ಕೆಲವೇ ಕ್ಷಣಗಳ ಮುಂಚೆ ಆತ ಎಚ್ಚರಗೊಂಡ ವಿಚಿತ್ರ ಘಟನೆ ವರದಿಯಾಗಿದೆ.
18 ವರ್ಷದ ಲೇವಿಸ್ ರಾಬರ್ಟ್ಸ್ ಎಂಬಾತ ವ್ಯಾನ್ಗೆ ಡಿಕ್ಕಿ ಹೊಡೆದ ಪರಿಣಾಮ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಈ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಲೇವಿಸ್ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು.
ಹೀಗಾಗಿ ಆತನ ದೇಹದ ಅಂಗಾಂಗಗಳನ್ನ ದಾನ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಆಶ್ಚರ್ಯ ಎಂಬಂತೆ ಲೇವಿಸ್ ಸಡನ್ ಆಗಿ ಉಸಿರಾಡಲು ಆರಂಭಿಸಿದ್ದಾನೆ.
ಮಾರ್ಚ್ 13ರಂದು ಬ್ರಿಟನ್ನ ಲೀಕ್ನಲ್ಲಿ ವ್ಯಾನ್ಗೆ ಡಿಕ್ಕಿ ಹೊಡೆದ ಪರಿಣಾಮ ಲೇವಿಸ್ ತಲೆಗೆ ಭಾರೀ ಪ್ರಮಾಣದಲ್ಲಿ ಹೊಡೆತ ಬಿದ್ದಿತ್ತು. ಕೂಡಲೇ ಲೇವಿಸ್ಗೆ ಶಸ್ತ್ರಚಿಕಿತ್ಸೆಯನ್ನ ಮಾಡಲಾಯ್ತು. ಆದರೆ ಮಾರ್ಚ್ 17ರಂದು ಆತನ ಮೆದುಳು ನಿಷ್ಕ್ರಿಯಗೊಳ್ತು. ಅಲ್ಲದೇ ಆದ ಸತ್ತು ಹೋಗಿದ್ದಾನೆ ಎಂದೂ ಘೋಷಣೆ ಮಾಡಲಾಗಿತ್ತು ಎಂದು ಲೇವಿಸ್ ಕುಟುಂಬಸ್ಥರು ಹೇಳಿದ್ರು.
ಲೇವಿಸ್ ನಿಧನದ ಬಳಿಕ ಆತನ ಅಂಗಾಂಗಗಳ ದಾನಕ್ಕೆ ಕುಟುಂಬಸ್ಥರು ಸಮ್ಮತಿ ನೀಡಿದ್ದಾರೆ. ಇನ್ನೇನು ಲೇವಿಸ್ಗೆ ಸರ್ಜರಿ ನಡೆಸಬೇಕು ಅನ್ನೋವಷ್ಟರಲ್ಲಿ ಲೇವಿಸ್ ಉಸಿರಾಡಿದ್ದಾನೆ. ಲೇವಿಸ್ ಚಿಕಿತ್ಸೆಗಾಗಿ 3.25 ಲಕ್ಷ ರೂಪಾಯಿ ದೇಣಿಗೆ ಸಂಗ್ರಹವಾಗಿದೆ.