alex Certify 11 ತಿಂಗಳ ಕಾಲ ಕೋಮಾದಲ್ಲಿದ್ದವನು ಎಚ್ಚರಗೊಂಡಾಗ ಕಾದಿತ್ತು ಅಚ್ಚರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

11 ತಿಂಗಳ ಕಾಲ ಕೋಮಾದಲ್ಲಿದ್ದವನು ಎಚ್ಚರಗೊಂಡಾಗ ಕಾದಿತ್ತು ಅಚ್ಚರಿ….!

ಅಪಘಾತದಿಂದ ಮೂರ್ಛೆ ಹೋಗಿದ್ದ ಯುವಕ ಕೋಮಾಗೆ ಜಾರಿದ್ದು ಬರೋಬ್ಬರಿ 11 ತಿಂಗಳ ಬಳಿಕ ಎಚ್ಚರಗೊಂಡಿದ್ದಾನೆ. ಹೀಗಾಗಿ ಆತನಿಗೆ ಕೊರೊನಾ ವೈರಸ್​ ಬಗ್ಗೆ ಮಾಹಿತಿಯೇ ಇರಲಿಲ್ಲ..!

ರಸ್ತೆ ದಾಟುತ್ತಿದ್ದ ವೇಳೆ ಜೊಸೇಫ್​ ಫ್ಲಾವಿಲ್​ ಎಂಬಾತ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ಕಳೆದ ವರ್ಷ ಮಾರ್ಚ್​ 1ರಂದು ಈ ಘಟನೆ ನಡೆದಿತ್ತು.

ಇದಾದ ಮೂರು ವಾರಗಳ ಬಳಿಕ ದೇಶದಲ್ಲಿ ಕೊರೊನಾ ವೈರಸ್​ ಲಾಕ್​ಡೌನ್​ ಆಗಿದೆ. ಆದರೆ ಇಷ್ಟರಲ್ಲಾಗಲೇ ಜೋಸೆಫ್​ ಕೋಮಾಗೆ ಜಾರಿದ್ದ.

19 ವರ್ಷದ ಜೋಸೆಫ್​​ನನ್ನ ಲೈಸೆಸ್ಟರ್​ ಜನರಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ಬಳಿಕ ಆತ 11 ತಿಂಗಳು ಕೋಮಾದಲ್ಲಿದ್ದ. ಇದೀಗ ಈತ ಎಚ್ಚರಗೊಂಡಿದ್ದು ಕೊರೊನಾ ವೈರಸ್, ಲಾಕ್​ಡೌನ್​, ಸಾಮಾಜಿಕ ಅಂತರದ ಕತೆಗಳನ್ನ ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...