ಅಪಘಾತದಿಂದ ಮೂರ್ಛೆ ಹೋಗಿದ್ದ ಯುವಕ ಕೋಮಾಗೆ ಜಾರಿದ್ದು ಬರೋಬ್ಬರಿ 11 ತಿಂಗಳ ಬಳಿಕ ಎಚ್ಚರಗೊಂಡಿದ್ದಾನೆ. ಹೀಗಾಗಿ ಆತನಿಗೆ ಕೊರೊನಾ ವೈರಸ್ ಬಗ್ಗೆ ಮಾಹಿತಿಯೇ ಇರಲಿಲ್ಲ..!
ರಸ್ತೆ ದಾಟುತ್ತಿದ್ದ ವೇಳೆ ಜೊಸೇಫ್ ಫ್ಲಾವಿಲ್ ಎಂಬಾತ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ಕಳೆದ ವರ್ಷ ಮಾರ್ಚ್ 1ರಂದು ಈ ಘಟನೆ ನಡೆದಿತ್ತು.
ಇದಾದ ಮೂರು ವಾರಗಳ ಬಳಿಕ ದೇಶದಲ್ಲಿ ಕೊರೊನಾ ವೈರಸ್ ಲಾಕ್ಡೌನ್ ಆಗಿದೆ. ಆದರೆ ಇಷ್ಟರಲ್ಲಾಗಲೇ ಜೋಸೆಫ್ ಕೋಮಾಗೆ ಜಾರಿದ್ದ.
19 ವರ್ಷದ ಜೋಸೆಫ್ನನ್ನ ಲೈಸೆಸ್ಟರ್ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ಬಳಿಕ ಆತ 11 ತಿಂಗಳು ಕೋಮಾದಲ್ಲಿದ್ದ. ಇದೀಗ ಈತ ಎಚ್ಚರಗೊಂಡಿದ್ದು ಕೊರೊನಾ ವೈರಸ್, ಲಾಕ್ಡೌನ್, ಸಾಮಾಜಿಕ ಅಂತರದ ಕತೆಗಳನ್ನ ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾನೆ.