alex Certify ಪ್ರತಿಭಟನೆ ಬಳಿಕ ರಸ್ತೆ ಸ್ವಚ್ಛಗೊಳಿಸಿದವನಿಗೆ ‘ಬಂಪರ್’ ಉಡುಗೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನೆ ಬಳಿಕ ರಸ್ತೆ ಸ್ವಚ್ಛಗೊಳಿಸಿದವನಿಗೆ ‘ಬಂಪರ್’ ಉಡುಗೊರೆ

ಕೃಷ್ಣವರ್ಣೀಯ ಜಾರ್ಜ್ ಫ್ಲಾಯ್ಡ್‌ ಕೊಲೆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ‘Black Lives Matter’ ಹೆಸರಿನಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಿಗೇ, ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಆಸ್ತಿ ಪಾಸ್ತಿ ಹಾನಿ ಹಾಗೂ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ.

ಪ್ರತಿಭಟನೆಗಳು ನಡೆದ ಬೆನ್ನಿಗೇ ಅಮೆರಿಕದ ಊರುಗಳ ಬೀದಿಗಳಲ್ಲಿ ಭಿತ್ತಿಪತ್ರಗಳು, ಪಾಂಪ್ಲೆಟ್‌ಗಳು, ಪ್ಲಾಸ್ಟಿಕ್‌ ತ್ಯಾಜ್ಯ ಹಾಗೂ ಆಹಾರದ ಪೊಟ್ಟಣಗಳ ಕಸ ತೆಗೆಯುವುದೇ ದೊಡ್ಡ ಸಮಸ್ಯೆಯಾಗಿದೆ.

ಇಂಥ ಸಂದರ್ಭದಲ್ಲಿ ನ್ಯೂಯಾರ್ಕ್‌ನ ಬಫೆಲೋ ನಗರದಲ್ಲಿ ವ್ಯಕ್ತಿಯೊಬ್ಬ ರಸ್ತೆಗಳು ಹಾಗೂ ಬೀದಿಗಳನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕೆ ಮುಂದಾಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಆಂಟೋನಿಯೊ ಗ್ವಿನ್ ಹೆಸರಿನ ಈತ ತನ್ನೂರಿನಲ್ಲಿ ಪ್ರತಿಭಟನೆಗಳು ನಡೆಯುವ ಸಂದರ್ಭದಲ್ಲಿ ರಸ್ತೆಗಳು ಕಸಮಯವಾಗುವುದನ್ನು ಕಂಡಿದ್ದಾನೆ.

ರಸ್ತೆಯನ್ನು ಸ್ವಚ್ಛಗೊಳಿಸಲು ಖುದ್ದು ತಾನೇ ಕಸದ ಪೊರಕೆಯನ್ನು ತಂದ ಆಂಟೋನಿಯೋ ಕಸವನ್ನೆಲ್ಲಾ ಎತ್ತಿ ಕಸದ ಬ್ಯಾಗ್‌ಗಳಿಗೆ ಹಾಕಿದ್ದಾನೆ. ಮುಂಜಾನೆ 2 ಗಂಟೆಯಿಂದ ಆರಂಭಿಸಿ ಸತತ 10 ಗಂಟೆಗಳ ಕಾಲ ಈ ಕೆಲಸವನ್ನು ಮಾಡಿದ ಈತನ ಸಾಮಾಜಿಕ ಬದ್ಧತೆಯನ್ನು ಕಂಡ ಆ ಏರಿಯಾದ ನಿವಾಸಿಗಳು ಆತನನ್ನು ಮೆಚ್ಚಿಕೊಂಡಿದ್ದಾರೆ.

ಇದೇ ಖುಷಿಯಲ್ಲಿ ಈ ಹದಿಹರೆಯದ ಹುಡುಗನಿಗೆ ಇಲ್ಲಿನ ಬ್ಯುಸಿನೆಸ್‌ಮನ್ ಒಬ್ಬರು ಕೆಂಪು ಬಣ್ಣದ ಮಸ್ಟಾಂಗ್ ಕಾರೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದು, ಒಂದು ವರ್ಷದ ಮಟ್ಟಿಗೆ ಅದರ ನಿರ್ವಹಣೆಯನ್ನೂ ಸಹ ವಹಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...