ನ್ಯೂಜಿಲೆಂಡ್ನಲ್ಲಿ ತಾಯಿಯೊಬ್ಬಳು ತನ್ನ 5 ವರ್ಷದ ಮಗಳನ್ನ ಡೇ ಕೇರ್ನಲ್ಲಿ ದಾಖಲು ಮಾಡಿದ್ದರು. ಈ ಮಗುವಿನ ಹೆಸರು ಉಚ್ಛಾರಣೆ ಮಾಡೋದು ಕಷ್ಟ ಎಂದು ಶಿಕ್ಷಕರು ಮಗಳ ಹೆಸರನ್ನೇ ಶಾರ್ಟ್ ಮಾಡಿದ ವಿಚಾರ ಕೇಳಿ ತಾಯಿ ಶಾಕ್ ಆಗಿದ್ದಾರೆ.
ಮಹಿನಾರಂಗಿ ಟೌಟು ಎಂಬ ಹೆಸರನ್ನ ರಂಗಿ ಎಂದು ಬದಲಾಯಿಸಲಾಗಿದೆ.
ಮಹಿನಾರಂಗಿ ಹೆಸರನ್ನ ಶಾಲೆಯಲ್ಲಿ ತಪ್ಪಾಗಿ ಉಚ್ಚರಿಸಲಾಗ್ತಾ ಇತ್ತು. ಇದರಿಂದ ಆಕೆ ಮುಜುಗರಕ್ಕೆ ಒಳಗಾಗುತ್ತಿದ್ದಳು.
ನನ್ನ ಪೂರ್ವಜರು ವಸಾಹತುಶಾಹಿಯ ಕಾರಣ ಪೆರೆಪೆ – ಪೆರನಾವನ್ನ ಫಿಲಿಪ್ಸ್ ಎಂದು ಬದಲಾಯಿಸಿಕೊಂಡ್ರು. ಆದರೆ ನನ್ನ ಮಗಳಿಗೆ ಈ ರೀತಿ ಆಗೋಕೆ ನಾನು ಬಿಡೋದಿಲ್ಲ ಎಂದು ಬಾಲಕಿಯ ಅಮ್ಮ ಹೇಳಿದ್ದಾರೆ.
ಈ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ ಭಾರತದ 9 ವರ್ಷದ ಬಾಲಕಿ
ಮಹಿನಾ ಅಂದರೆ ಚಂದ್ರ ಎಂದು ಅರ್ಥ. ರಂಗಿ ಎಂದರೆ ಆಕಾಶ. ಮಹಿನಾರಂಗಿ ಅಂದರೆ ಆಕಾಶದಲ್ಲಿ ಚಂದ್ರ ಎಂಬರ್ಥ ಹೊಂದಿದೆ. ಈಗ ಹೆಸರನ್ನ ಶಾರ್ಟ್ ಮಾಡಿರೋದ್ರಿಂದ ಅರ್ಥ ಸಂಪೂರ್ಣವಾಗಿ ಬದಲಾಗಿದೆ.