
ಚೀನಾದ ಶಿಕ್ಷಕರೊಬ್ಬರು ತರಗತಿಗೆ ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಮುಖದ ಮೇಲೆ ಪ್ರಯತ್ನಪೂರ್ವಕವಾಗಿ ಮಂದಹಾಸ ಬರಿಸಿಕೊಂಡ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ.
ತರಗತಿಯ ಹೊರಗಿನ ಕಾರಿಡಾರ್‌ನಲ್ಲಿ ನಿಂತುಕೊಂಡ ಶಿಕ್ಷಕ, ಆಳವಾದ ಉಸಿರೆಳೆದುಕೊಂಡು, ಮುಖದ ಮೇಲೆ ನಗು ಬರಿಸಿಕೊಳ್ಳಲು ನೋಡುತ್ತಿರುವ ಫುಟೇಜ್ ಅನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಉತ್ತರ ಚೀನಾದ ಕಿಂಗುವಾಂಗ್ಡೋ ನಗರದಲ್ಲಿ ಈ ಶಾಲೆ ಇದೆ.
ಕೋವಿಡ್-19 ಸಂಕಷ್ಟದ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಉಲ್ಲಾಸಿತರಾಗಿ ಇರಿಸಲು ಈ ಶಿಕ್ಷಕ ಮಾಡುತ್ತಿರುವ ಪ್ರಯತ್ನಕ್ಕೆ ನೆಟ್ಟಿಗರ ಬಳಗದಿಂದ ಶ್ಲಾಘನೆಗಳು ಮೂಡಿ ಬಂದಿವೆ.