ಕೊರೊನಾ ವೈರಸ್ನಿಂದ ವಿಶ್ವಾದ್ಯಂತ 85 ದಶಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದರೂ ಸಹ ಫೇಸ್ ಮಾಸ್ಕ್ ಧರಿಸಲು ನಿರಾಕರಿಸುವ ಹಾಗೂ ವೈರಸ್ ನಿಜವಲ್ಲ ಎಂದು ನಂಬುವ ಮೂರ್ಖ ಜನರು ಇನ್ನೂ ನಮ್ಮ ನಡುವೆ ಇದ್ದಾರೆ.
ಈಗಾಗಲೇ ಕೊರೊನಾ ವೈರಸ್ ನಿಜವಲ್ಲ ಎಂದು ಪ್ರತಿಪಾದಿಸುತ್ತಾ ಬೀದಿಗಳಲ್ಲಿ ಮಾಸ್ಕ್ ಧರಿಸದೇ ಪ್ರತಿಭಟನೆ ಮಾಡುತ್ತಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಂಕ್ರಾಮಿಕ ರೋಗವನ್ನ ಗಂಭೀರವಾಗಿ ಪರಿಗಣಿಸಲು ನಿರಾಕರಿಸಿದ ಅನೇಕ ಮಂದಿ ಲಾಕ್ಡೌನ್ ನಿಯಮಗಳನ್ನ ಉಲ್ಲಂಘಿಸುತ್ತಿದ್ದಾರೆ.
ಇನ್ನು ಫೇಸ್ಮಾಸ್ಕ್ಗಳ ವಿಚಾರಕ್ಕೆ ಬರೋದಾದ್ರೆ, ಕೊರೊನಾ ವೈರಸ್ ಹರಡುವಿಕೆ ನಿಂತಿದೆ ಎಂದು ಭಾವಿಸಿದ ಅನೇಕರು ಅವುಗಳನ್ನ ಮುಖಕ್ಕೆ ಧರಿಸೋದನ್ನೇ ನಿಲ್ಲಿಸಿದ್ದಾರಂತೆ.
ಅದರೆ ಇಂತಹ ಸಮಾಜಘಾತುಕರ ನಡುವೆ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸದ ಜನರಿಗೆ ತಕ್ಕಪಾಠ ಕಲಿಸುವಂತಹ ಪ್ರಜ್ಞಾವಂತ ನಾಗರಿಕರೂ ನಮ್ಮೊಡನೆ ಇದ್ದಾರೆ.
ಸವಾರಿ ಸಮಯದಲ್ಲಿ ಫೇಸ್ಮಾಸ್ಕ್ ಧರಿಸಲು ನಿರಾಕರಿಸಿದ ಪಾನಮತ್ತನಾಗಿದ್ದ ಪ್ರಯಾಣಿಕನನ್ನ ಹೊಸ ವರ್ಷದ ದಿನವೇ ವ್ಯಾಂಕೋವರ್ ಟ್ಯಾಕ್ಸಿ ಡ್ರೈವರ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸಿದ್ದಾನೆ. ಪೊಲೀಸ್ ಠಾಣೆಯಲ್ಲಿ ಆತನಿಗೆ $690 (50,347.54 ರೂ.) ದಂಡ ವಿಧಿಸಲಾಗಿದೆ.