alex Certify ದಂಗಾಗಿಸುವಂತಿದೆ‌ 50 ವರ್ಷ ಹಳೆಯ ನೈಕಿ ಶೂ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ‌ 50 ವರ್ಷ ಹಳೆಯ ನೈಕಿ ಶೂ ಬೆಲೆ…!

ಯಾವುದೇ ವಸ್ತುವಿನ ಸಂಗ್ರಹದ ಅಭ್ಯಾಸ ನಿಮಗೆ ಇದ್ದರೆ, ವಿಂಟೇಜ್ ಪೀಸ್‌ಗಳ ಮೇಲೆ ಬಹಳವೇ ವ್ಯಾಮೋಹ ಇರಲೇಬೇಕು. ಕ್ರೀಡಾ ಉತ್ಪನ್ನಗಳ ತಯಾರಕ ನೈಕಿಯ ವಿಂಟೇಜ್ ಶೂ ’ಮೂನ್ ಶೂ’ ಮಾರಾಟಕ್ಕಿದೆ.

1970ರ ದಶಕದ ಈ ಶೂಗಳಿಗೆ ಅವುಗಳದ್ದೇ ಇತಿಹಾಸವಿದ್ದು, ಲಂಡನ್ ಮೂಲದ ಹರಾಜುದಾರ ಸೋಥ್‌ಬೇ ತನ್ನ ಜಾಲತಾಣದಲ್ಲಿ ಹರಾಜಿಗೆ ಇಟ್ಟಿದೆ. ಈ ಶೂಗಳ ಹೊರಮೈ ಮೇಲಿನ ಪ್ಯಾಟರ್ನ್ ಮೇಲೆ ಧೂಳು ಕೂತಾಗ ಹಾಗೂ 1969ರಲ್ಲಿ ನಾಸಾ ಗಗನಯಾತ್ರಿಗಳು ಚಂದ್ರನ ಅಂಗಳದಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ ಕ್ಷಣಗಳನ್ನು ನೆನಪಿಸುತ್ತದೆ.

ನೈಕಿಯ ಸಹ ಸ್ಥಾಪಕ ಬಿಲ್ ಬೋವರ್ಮನ್ ಖುದ್ದು ಡಿಸೈನ್ ಮಾಡಿರುವ ಈ ಶೂ ಅನ್ನು 1972ರ ಒಲಿಂಪಿಕ್ಸ್ ಟ್ರಯಲ್ಸ್‌ನಲ್ಲಿ ಬಳಸಲಾಗಿತ್ತು. ಸದ್ಯ ಕೆಲವೇ ಕೆಲವು ಮೂನ್ ಶೂಗಳು ಲಭ್ಯವಿದ್ದು, ಹರಾಜಿನಲ್ಲಿ ಈ ಶೂಗಳ ಒಂದು ಜೋಡಿ $150,000 ಮಾರಾಟವಾಗುವ ನಿರೀಕ್ಷೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...