
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಇಟಲಿಯ ಅಧಿಕಾರಿಯು ಪಾರ್ಕಿಂಗ್ ಸ್ಥಳದ ಸಮೀಪವೇ ಇದ್ದ ಕೋವಿಡ್ ವಾರ್ಡ್ನ್ನು ಸ್ಥಳಾಂತರ ಮಾಡುವಂತೆ ಹೇಳಿದ್ದಾರೆ.
ಸುಮಾರು 22 ಸಾವಿರ ಚದರ ಅಡಿ ಅಗಲ ಹಾಗೂ 66 ಅಡಿ ಆಳದ ಸಿಂಕ್ಹೋಲ್ ವಿಡಿಯೋಗಳು ಶುಕ್ರವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ. ಸಿಂಕ್ಹೋಲ್ ಭಯಾನಕ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಇನ್ನು ಈ ಸಂಬಂಧ ತನಿಖೆ ನಡೆಸಲು ಹಾಗೂ ಸಿಂಕ್ ಹೋಲ್ ಉಂಟಾಗಲು ಕಾರಣ ಕಂಡುಹಿಡಿಯಲು ತಾಂತ್ರಿಕ ತಜ್ಞರನ್ನ ನೇಮಿಸಲಾಗಿದೆ. ಕಳೆದ ವಾರ ಉಂಟಾದ ಭಾರೀ ಮಳೆಯೇ ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.
ಇನ್ನು ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ ಇಟಲಿ ಅಗ್ನಿಶಾಮಕ ದಳ ಇಲಾಖೆ ಅವಶೇಷಗಳಡಿ ಯಾರೂ ಸಿಕ್ಕಿಬಿದ್ದಿಲ್ಲ ಎಂಬುದನ್ನ ಖಚಿತಪಡಿಸಿದೆ. ಕೋವಿಡ್ ವಾರ್ಡ್ನಿಂದ 6 ಮಂದಿ ಲಕ್ಷಣ ರಹಿತ ಸೋಂಕಿತರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.