alex Certify ನಾಯಿಯನ್ನ ಪಾರ್ಕ್ ನಲ್ಲಿ ಬಿಟ್ಟು ದುಃಖದ ಪತ್ರ ಬರೆದ ಮಾಲೀಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯನ್ನ ಪಾರ್ಕ್ ನಲ್ಲಿ ಬಿಟ್ಟು ದುಃಖದ ಪತ್ರ ಬರೆದ ಮಾಲೀಕ..!

ತನ್ನ ಹಳೆಯ ಮಾಲೀಕ ಅಸಹಾಯಕತೆಯ ಬಗ್ಗೆ ಬರೆದಿರುವ ಪತ್ರವೊಂದನ್ನ ಹಿಡಿದ ನಾಯಿ ಮೆಕ್ಸಿಕೋ ನಗರದ ಪಾರ್ಕ್​ನಲ್ಲಿ ಕೂತಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ.

ದಯವಿಟ್ಟು ಈ ನಾಯಿಯನ್ನ ಯಾರಾದರೂ ಮನೆಗೆ ಕರೆದುಕೊಂಡು ಹೋಗಿ ಸಾಕಿ. ನನ್ನ ನಾಯಿಯನ್ನ ಹೀಗೆ ಬಿಟ್ಟುಹೋಗಲು ನನಗೆ ತುಂಬಾನೇ ನೋವಾಗುತ್ತಿದೆ. ಆದರೆ ನನ್ನ ಸಂಬಂಧಿಕರು ಈ ಶ್ವಾನಕ್ಕೆ ಕೊಟ್ಟ ಕಷ್ಟವನ್ನ ನನಗೆ ಸಹಿಸಲು ಸಾಧ್ಯವಾಗಲಿಲ್ಲ. ನೀವು ಯಾರಾದರೂ ಈ ಪತ್ರವನ್ನ ಓದುತ್ತಾ ಇದ್ದರೆ ದಯವಿಟ್ಟು ಈ ಶ್ವಾನವನ್ನ ಸಾಕಿ. ಸಾಧ್ಯವಾಗಿಲ್ಲ ಅಂದರೆ ಈ ಪತ್ರವನ್ನ ನಾಯಿಯ ಬಳಿಯೇ ಬಿಡಿ. ಈ ಪತ್ರವನ್ನ ಇನ್ನೊಬ್ಬರಿಗೆ ಓದಲು ಅವಕಾಶ ನೀಡಿ ಎಂದು ಬರೆಯಲಾಗಿದೆ.

ಪ್ರಾಣಿ ದಯಾ ಸಂಘ ಈ ನಾಯಿಯನ್ನ ದತ್ತು ಪಡೆದಿದ್ದು ಬಾಸ್ಟೋನ್​ ಎಂದು ನಾಯಿಗೆ ನಾಮಕರಣ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...