ತನ್ನ ಹಳೆಯ ಮಾಲೀಕ ಅಸಹಾಯಕತೆಯ ಬಗ್ಗೆ ಬರೆದಿರುವ ಪತ್ರವೊಂದನ್ನ ಹಿಡಿದ ನಾಯಿ ಮೆಕ್ಸಿಕೋ ನಗರದ ಪಾರ್ಕ್ನಲ್ಲಿ ಕೂತಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.
ದಯವಿಟ್ಟು ಈ ನಾಯಿಯನ್ನ ಯಾರಾದರೂ ಮನೆಗೆ ಕರೆದುಕೊಂಡು ಹೋಗಿ ಸಾಕಿ. ನನ್ನ ನಾಯಿಯನ್ನ ಹೀಗೆ ಬಿಟ್ಟುಹೋಗಲು ನನಗೆ ತುಂಬಾನೇ ನೋವಾಗುತ್ತಿದೆ. ಆದರೆ ನನ್ನ ಸಂಬಂಧಿಕರು ಈ ಶ್ವಾನಕ್ಕೆ ಕೊಟ್ಟ ಕಷ್ಟವನ್ನ ನನಗೆ ಸಹಿಸಲು ಸಾಧ್ಯವಾಗಲಿಲ್ಲ. ನೀವು ಯಾರಾದರೂ ಈ ಪತ್ರವನ್ನ ಓದುತ್ತಾ ಇದ್ದರೆ ದಯವಿಟ್ಟು ಈ ಶ್ವಾನವನ್ನ ಸಾಕಿ. ಸಾಧ್ಯವಾಗಿಲ್ಲ ಅಂದರೆ ಈ ಪತ್ರವನ್ನ ನಾಯಿಯ ಬಳಿಯೇ ಬಿಡಿ. ಈ ಪತ್ರವನ್ನ ಇನ್ನೊಬ್ಬರಿಗೆ ಓದಲು ಅವಕಾಶ ನೀಡಿ ಎಂದು ಬರೆಯಲಾಗಿದೆ.
ಪ್ರಾಣಿ ದಯಾ ಸಂಘ ಈ ನಾಯಿಯನ್ನ ದತ್ತು ಪಡೆದಿದ್ದು ಬಾಸ್ಟೋನ್ ಎಂದು ನಾಯಿಗೆ ನಾಮಕರಣ ಮಾಡಿದೆ.