alex Certify ಐಫೋನ್ ಹೊಂದಿರುವವರು ಖುಷಿಪಡಲು ಇಲ್ಲಿದೆ ಮತ್ತೊಂದು ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಫೋನ್ ಹೊಂದಿರುವವರು ಖುಷಿಪಡಲು ಇಲ್ಲಿದೆ ಮತ್ತೊಂದು ಕಾರಣ

ಕಳೆದ 56 ವರ್ಷಗಳಲ್ಲೇ ಅತ್ಯಂತ ಭೀಕರ ಬರಗಾಲಕ್ಕೆ ತೈವಾನ್ ತುತ್ತಾಗಿದೆ. ಬರದಿಂದಾಗಿ ಈ ದೇಶದ ಅತ್ಯಂತ ಜನಪ್ರಿಯ ಕೆರೆಯೊಂದು ಬತ್ತಿ ಹೋಗಿದೆ.

ಚೆನ್ ಹೆಸರಿನ ವ್ಯಕ್ತಿಗೆ ಇಂಥ ಅಲ್ಪಕಾಲವೂ ಸಹ ಸಂತಸದ ಕ್ಷಣವೊಂದನ್ನು ತನ್ನೊಡಲಲ್ಲಿ ಇಟ್ಟುಕೊಂಡು ಬಂದಿದೆ. ಸನ್-ಮೂನ್ನ ಹೆಸರಿನ ಈ ಕೆರೆಯಲ್ಲಿ ಕಳೆದ ವರ್ಷ ಈ ವ್ಯಕ್ತಿ ತನ್ನ ಐಫೋನ್‌ ಕಳೆದುಕೊಂಡಿದ್ದರು. ಕೆರೆಯಲ್ಲಿ ಪ್ಯಾಡಲ್ ಬೋಟಿಂಗ್ ಮಾಡುತ್ತಿದ್ದ ವೇಳೆ ಕೆರೆಯ ನೀರಿನಲ್ಲಿ ತಮ್ಮ ಐಫೋನ್ ಕಳೆದುಕೊಂಡಿದ್ದರು ಚೆನ್.

ಫೇಸ್ಬುಕ್ ಡೇಟಾ ಸೋರಿಕೆ ಬೆನ್ನಲ್ಲೇ ಈ ಜಾಲತಾಣ ಬಳಕೆದಾರರಿಗೆ ಬಿಗ್ ಶಾಕ್: 50 ಕೋಟಿ ಲಿಂಕ್ಡ್ ಇನ್ ಡೇಟಾ ಲೀಕ್

ಬರ ಬಂದು ಬತ್ತಿ ಹೋಗಿದ್ದ ಕೆರೆಯನ್ನು ಸ್ವಚ್ಛಗೊಳಿಸುತ್ತಿದ್ದ ಕೆಲಸಗಾರರೊಬ್ಬರಿಂದ ಬಂದ ಕರೆ ಸ್ವೀಕರಿಸಿದ ಚೆನ್‌ಗೆ, ತಮ್ಮ ಫೋನ್‌ ಸಿಕ್ಕಿರುವ ವಿಷಯ ಕಿವಿಗೆ ಬಿದ್ದಿದೆ. ವರ್ಷದ ಹಿಂದೆ ಕಳೆದು ಹೋಗಿದ್ದ ತಮ್ಮ ಫೋನ್ ‌ಅನ್ನು ಪಡೆದುಕೊಳ್ಳಲು ಹೋದ ಚೆನ್‌ಗೆ ಆ ಡಿವೈಸ್ ಸಂಪೂರ್ಣ ಕೆಲಸ ಮಾಡುವ ಸ್ಥಿತಿಯಲ್ಲಿರುವುದನ್ನು ಕಂಡು ಅಚ್ಚರಿಯಾಗಿದೆ.

ಕಳೆದ 50-60 ವರ್ಷಗಳಲ್ಲೇ ಅತ್ಯಂತ ಹೆಚ್ಚು ಬತ್ತಿ ಹೋಗಿರುವ ಈ ಕೆರೆಯಲ್ಲಿ ಅನಿರೀಕ್ಷಿತವಾಗಿ ತಮಗೆ ಮರಳಿ ಸಿಕ್ಕ ಫೋನ್‌ ಕಂಡು ಖುಷಿಯಾದ ಚೆನ್‌ ಈ ವಿಚಾರವನ್ನು ಫೇಸ್ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

https://www.facebook.com/yj.chen.940/posts/5931428713549620

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...