ಉತಾಹ್, ರೋಮೇನಿಯಾ ಹಾಗೂ ಕ್ಯಾಲಿಫೋರ್ನಿಯಾ ಬಳಿಕ ಇದೀಗ ಅಮರಿಕದ ಗ್ರ್ಯಾಂಡ್ಪಾ ಜೋಸ್ ಕ್ಯಾಂಡಿ ಅಂಗಡಿಯ ಹೊರಗೆ ಲೋಹದ ಏಕಶಿಲೆ ಕಾಣಿಸಿಕೊಂಡಿದೆ. ಈ ಲೋಹದ ಏಕಶಿಲೆ ಅಂಗಡಿಗೆ ಗ್ರಾಹಕರನ್ನ ಆಕರ್ಷಿಸಲು ಸಹಾಯ ಮಾಡುತ್ತಿದೆ.
ಲೋಹದ ಏಕಶಿಲೆ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಹೊಂದಿದ್ದ ಕ್ಯಾಂಡಿಶಾಪ್ ಮಾಲೀಕ ಕ್ರಿಸ್ಟೋಫರ್ ಬೀರ್ಸ್ ತಮ್ಮ ಅಂಗಡಿಗಾಗಿ 10 ಅಡಿ ಎತ್ತರ ಹಾಗೂ 24 ಇಂಚು ಅಗಲದ ಏಕಶಿಲೆಯನ್ನ ಅಂಗಡಿ ಮುಂದೆ ಸ್ಥಾಪಿಸಿದ್ದಾರೆ.
ಕೊರೊನಾದಿಂದಾಗಿ ತೀವ್ರ ಹಾನಿಗೆ ಒಳಗಾದ ಸ್ಥಳೀಯ ವ್ಯವಹಾರಗಳನ್ನ ಬೆಂಬಲಿಸುವ ಬಗ್ಗೆ ಜಾಗೃತಿ ಮೂಡಿಸಲು ಕ್ರಿಸೋಫರ್ ಬಿಯರ್ಸ್ ಈ ಅವಕಾಶ ಬಳಸಿಕೊಳ್ತಿದ್ದಾರೆ. ಅಂಗಡಿ ಮಾಲೀಕ ಈ ಲೋಹದ ಆಕೃತಿಯನ್ನ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಅನೇಕರು ಈ ಆಕೃತಿಯನ್ನ ಚಾಕಲೇಟ್ನಿಂದ ತಯಾರಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.