ಕೊರೊನಾ ವೈರಸ್ ಸಂಕಷ್ಟ ಶುರುವಾದಾಗಿನಿಂದ ಮಾಸ್ಕ್ ನಮ್ಮ ಜೀವನದ ಅವಿಭಾಜ್ಯ ಅಂಗವೆಂಬಂತೆ ಬೆರತು ಹೋಗಿದೆ. ಕೊರೊನಾ ವಿರುದ್ಧ ನೀವು ಮಾಸ್ಕ್ ಬಳಕೆ ಮಾಡಬೇಕಾದ್ದರಿಂದ ಮಾಸ್ಕ್ ಆಯ್ಕೆ ವೇಳೆ ತುಸು ಹೆಚ್ಚೇ ಜಾಗೂರಕರಾಗಿ ಇರೋದು ಒಳ್ಳೇದು.
ಅಮೆರಿಕದ ಸಂಶೋಧನಾ ತಂಡವೊಂದು ಸಾರ್ವಜನಿಕರು ಹಾಗೂ ವೃತ್ತಿಪರರು ಧರಿಸುವ ಮಾಸ್ಕ್ಗಳನ್ನ ಪರಿಶೀಲನೆ ಮಾಡಿದೆ. ನೈಲಾನ್ ಮಾಸ್ಕ್ಗಳು ವೈರಸ್ನ್ನ 79 ಪ್ರತಿಶತದವರೆಗೆ ತಡೆಯಬಲ್ಲುದು ಎಂಬ ಅಂಶ ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಅಮೆರಿಕ ಪರಿಸರ ರಕ್ಷಣೆ ವಿಭಾಗದ ಸಹಭಾಗಿತ್ವದಲ್ಲಿ ನಾರ್ಥ್ ಕೆರೊಲಿನಾ ಸ್ಕೂಲ್ ಆಫ್ ಮೆಡಿಸಿನ್ನ ವಿಜ್ಞಾನಿಗಳು ಸರ್ಜಿಕಲ್ ಮಾಸ್ಕ್, ಬಟ್ಟೆಯ ಮಾಸ್ಕ್ ಸೇರಿದಂತೆ 12 ವಿಧದ ಮಾಸ್ಕ್ಗಳನ್ನ ಅಧ್ಯಯನ ಮಾಡಿದ್ದಾರೆ.
ಜಮಾ ಇಂಟರ್ನಲ್ ಮೆಡಿಸಿನ್ನಲ್ಲಿ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯ ವರದಿ ಪ್ರಕಾರ ಮಾಸ್ಕ್ನ ಆಕೃತಿ ಕೂಡ ಅದರ ಪರಿಣಾಮಕಾರತ್ವವನ್ನ ನಿರ್ಧರಿಸಬಲ್ಲದು. ಸರ್ಜಿಕಲ್ ಮಾಸ್ಕ್ ವೈರಾಣುಗಳ ವಿರುದ್ಧ 38.9 ಶೇಕಡಾ ಪರಿಣಾಮಕಾರಿಯಾಗಿದೆ. ಆದರೆ ಈ ಮಾಸ್ಕ್ಗೆ ಸರಿಯಾದ ಕಿವಿ ಹಿಡಿಕೆ ಹಾಗೂ ಮೂಗಿನ ಭಾಗದಲ್ಲಿ ಹಿಡಿಕೆಯನ್ನ ಅಳವಡಿಸಿದ್ರೆ ಈ ಮಾಸ್ಕ್ 60.3 ಶೇಕಡಾ ಪರಿಣಾಮಕಾರಿಯಾಗಲಿದೆ. ಇದೇ ಮಾಸ್ಕ್ಗೆ ನೈಲಾನ್ ಪರದೆಯನ್ನ ಸೇರಿಸಿದ್ರೆ 80 ಪ್ರತಿಶತ ಪರಿಣಾಮಕಾರಿಯಾಗಲಿದೆ.
2 ನೈಲಾನ್ ಪದರಗಳನ್ನುಳ್ಳ ನೈಲಾನ್ ಮಾಸ್ಕ್ಗಳು ಶೇಕಡಾ 79ರಷ್ಟು ಪರಿಣಾಮಕಾರಿ, ಹತ್ತಿ ಬಟ್ಟೆಯಿಂದ ಮಾಡುವ ಸಂಪೂರ್ಣ ಮುಖಕ್ಕೆ ಮುಚ್ಚುವ ಮಾಸ್ಕ್ಗಳು ಶೇಕಡಾ 49ರಷ್ಟು ಪರಿಣಾಮಕಾರತ್ವವನ್ನ ತೋರಿಸಿವೆ. ಆದರೆ ಹತ್ತಿ ಬಟ್ಟೆಯಲ್ಲಿ ಸರ್ಜಿಕಲ್ ಮಾದರಿಯ ಮಾಸ್ಕ್ಗಳನ್ನ ಬಳಕೆ ಮಾಡುವವರು ನೀವಾಗಿದ್ದಾರೆ ಇದು ಕೇವಲ 26.5 ಶೇಕಡಾದಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ಹೇಳಿದೆ.