alex Certify ಅಮೆರಿಕಾದಲ್ಲಿ ಹಾರಾಟ ನಡೆಸಿದೆಯಾ UFO…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದಲ್ಲಿ ಹಾರಾಟ ನಡೆಸಿದೆಯಾ UFO…?

ಸೂಟ್ ಕೇಸ್ ಗಾತ್ರದ ಸಿಲ್ವರ್ ಬಣ್ಣದ ಅಪರಿಚಿತ ವಿಮಾನ ತನ್ನ ದೇಶದ ಪೂರ್ವ ಕರಾವಳಿ ಭಾಗದಲ್ಲಿ ಹಾರಾಟ ನಡೆಸಿರುವುದು ಅಮೆರಿಕ ಗಮನಕ್ಕೆ ಬಂದಿದೆ.

ಅಮೆರಿಕಾದ ನೇವಿ ಪೈಲೆಟ್ ಗಳು ಕಳೆದು ತಿಂಗಳು ನಡೆದ ಈ ಅಪರಿಚಿತ ವೈಮಾನಿಕ ವಿದ್ಯಮಾನಗಳನ್ನು ಬಹಿರಂಗಪಡಿಸಿದ್ದಾರೆ.

ವಾಯುಯಾನ ನಿಷೇಧಿತ ಪ್ರದೇಶವೆಂದು ಗುರುತಿಸಲಾದ ಕಡೆ ಇದು ಹಾರಾಟ ನಡೆಸಿದ್ದು, ಮಾನವರಹಿತ ವೈಮಾನಿಕ ಸಾಧನವಾಗಿದೆ. ಡ್ರೋಣ್ ಅಥವಾ ಮಿಸೈಲ್ ಗಾತ್ರ ಇರಬಹುದೆಂಬ ಅಭಿಪ್ರಾಯವೂ ಇದೆ.

ಈ ಬೆಳವಣಿಗೆಗಳ ಬಗ್ಗೆ ಒಂದಷ್ಟು ಚರ್ಚೆಗಳು ನಡೆದಿದ್ದರೂ ಅದರ ಬಗ್ಗೆ ಯಾವುದೇ ಸ್ಪಷ್ಟತೆ ಮೂಡಿಲ್ಲ.

ಪೆಂಟಗನ್ ಸಹ ಇತ್ತೀಚೆಗೆ ಮೂರು ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಇನ್ ಫ್ರಾ ರೆಡ್ ಕ್ಯಾಮರಾದಲ್ಲಿ ಗುರುತಿಸಲಾಗದ ಹಾರಾಟವನ್ನು ಗಮನಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...