ಮರಳು ಶಿಲ್ಪ ಕಲಾವಿದನ ಕೈಯಲ್ಲಿ ಮೂಡಿಬಂತು ಟ್ರಂಪ್, ಬಿಡೆನ್ ಕಲಾಕೃತಿ 08-11-2020 8:32AM IST / No Comments / Posted In: Featured News, International ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಎಲ್ಲರನ್ನ ತುದಿಗಾಲಲ್ಲಿ ನಿಲ್ಲಿಸಿತ್ತು. ಬಿಡೆನ್ ಹಾಗೂ ಟ್ರಂಪ್ ನಡುವೆ ಜಿದ್ದಾಜಿದ್ದಿಯ ಫೈಟ್ ನಡೆಯುತ್ತಿದ್ದ ಕಾರಣ ಅಂತಿಮ ಫಲಿತಾಂಶಕ್ಕಾಗಿ ಜನರು ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಓಡಿಶಾದ ಪುರಿ ಬೀಚ್ನಲ್ಲಿ ಬಿಡೆನ್ ಹಾಗೂ ಟ್ರಂಪ್ ಕಲಾಕೃತಿ ಬಿಡಿಸಿದ್ದಾರೆ. ಯುಎಸ್ ಎಲೆಕ್ಷನ್ 2020 ಎಂಬ ಶೀರ್ಷಿಕೆ ನೀಡುವ ಮೂಲಕ ಸುದರ್ಶನ್ ತಮ್ಮ ಕಲಾಕೃತಿಯನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಟ್ರಂಪ್ ಹಾಗೂ ಬಿಡೆನ್ ಮುಖಾಮುಖಿಯಾಗಿರುವ ರೀತಿಯಲ್ಲಿ ಕಲಾಕೃತಿ ರೂಪಿತವಾಗಿದೆ. ಆ ಸಂದರ್ಭದಲ್ಲಿ ಮುಂದಿನ ಅಧ್ಯಕ್ಷ ಯಾರೆಂಬುದು ಇನ್ನೂ ಫೈನಲ್ ಆಗದ ಕಾರಣ ಇಬ್ಬರ ಮಧ್ಯೆ ಪ್ರಶ್ನಾರ್ಥಕ ಚಿಹ್ನೆ ಬಿಡಿಸಿದ್ದಾರೆ. ಇದೀಗ ಅಮೆರಿಕಾದ ಅಧ್ಯಕ್ಷರಾಗಿ ಬಿಡೆನ್ ಆಯ್ಕೆಯಾಗಿದ್ದಾರೆ. #USElections2020 . My SandArt at Puri beach in Odisha, India. #USElectionResults #USPresidentialElections2020 pic.twitter.com/SG14Ycnrt8 — Sudarsan Pattnaik (@sudarsansand) November 6, 2020